ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿಯವರು ಪ್ರತಿ ವರ್ಷ ನಡೆಸುವ ರಾಜ್ಯ ಸಮ್ಮೇಳನದಲ್ಲಿ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಈ ಬಾರಿ ಸುಳ್ಯ ಐ.ಎಂ.ಎ ಅಧ್ಯಕ್ಷೆ, ಸ್ತ್ರೀ ರೋಗ ತಜ್ಞೆ ಡಾ. ವೀಣಾರವರಿಗೆ ನೀಡಲಾಯಿತು.
















ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆದ ನಾಲ್ಕನೆಯ ರಾಜ್ಯ ಸಮ್ಮೇಳನದಲ್ಲಿ ಡಾ. ಸಿ.ಆರ್ ಚಂದ್ರಶೇಖರ್ ಬೆಂಗಳೂರು ಹಾಗೂ ಡಾ. ವೀಣಾ ಎನ್ ಸುಳ್ಯ ಇವರಿಗೆ ಪ್ರಶಸ್ತಿ ವಿತರಣೆ ನಡೆಯಿತು.
ಈ ಪ್ರಶಸ್ತಿಗಳನ್ನು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಮತ್ತು ಪೃಥ್ವಿ ಮಕ್ಕಳ ಆಸ್ಪತ್ರೆ ಬಳ್ಳಾರಿ ಆಯೋಜಿಸಿತ್ತು.
ರಾಜ್ಯ ಐಎಮ್ಎ ಅಧ್ಯಕ್ಷ ಡಾ. ಎಸ್. ಪಿ. ಲಕ್ಕೋಳ, ಡಾ. ನಾ. ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು









