ಸೆ.8 ಸುಬ್ರಹ್ಮಣ್ಯ ಗ್ರಾಮ ಸಭೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು 08.09.2023ನೇ ಶುಕ್ರವಾರ ಪೂರ್ವಾಹ್ನ ಗಂಟೆ 10.30ಕ್ಕೆ ಸರಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ರಾಜೀವ ಗಾಂಧಿ ಸೇವಾ ಕೇಂದ್ರ ಸಭಾಭವನದಲ್ಲಿ ಜರಗಲಿರುವುದು.

ಯೇನೆಕಲ್ಲು, ಐನೆಕಿದು, ಸುಬ್ರಹ್ಮಣ್ಯ ಗ್ರಾಮಸ್ಥರು ಭಾಗವಹಿಸುವಂತೆ ಕೋರಲಾಗಿದೆ. ಈ ಹಿಂದೆ ಒಮ್ಮೆ ನಿಗದಿಯಾಗಿದ್ದ ಗ್ರಾಮ ಸಭೆ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು ನಾಳೆ ಸೆ.8 ರಂದು ನಡೆಯಲಿದೆ.