ಹರಿಹರ ಪಲ್ಲತಡ್ಕ ಗ್ರಾ.ಪಂ ಜಮಾ ಬಂದಿ

0

ಹರಿಹರ ಪಲ್ಲತಡ್ಕ ಗ್ರಾ.ಪಂ ನಲ್ಲಿ ಜಮಾಬಂದಿ ಕಾರ್ಯಕ್ರಮ ಸೆ. 7ರಂದು ನಡೆಯಿತು. ನೋಡಲ್ ಅಧಿಕಾರಿಯಾಗಿ ಬಿ .ಐ. ಇ .ಆರ್ .ಟಿ. ಅಧಿಕಾರಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಗ್ರಾ.ಪಂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಪದ್ಮಾವತಿ ಕಲ್ಲೇಮಠ, ಶಿಲ್ಪ ಕೊತ್ನಡ್ಕ, ಉಪಸ್ಥಿತರಿದ್ದರು.

ಪಿಡಿಒ ಪುರುಷೋತ್ತಮ ಮಣಿಯಾನ ಮನೆ ವೇದಿಕೆಯಲ್ಲಿದ್ದು ಕಾರ್ಯಕ್ರಮ ನರ್ವಹಿಸಿದರು. ಜಮಾಬಂದಿ ಬಳಿಕ ಗ್ರಾ.ಪಂ ನಲ್ಲಿ ಮಾಡಿದ ಕೆಲಸ ಹಾಗೂ ಗುಂಡಿಹಿತ್ಲು ಬಳಿ ಮಾಡಿದ ಕಾಂಕ್ರೀಟ್ ಕಾಮಾಗಾರಿ ಪರಿಶೀಲನೆ ನಡೆಸಲಾಯಿತು.