ಸೆ.24: ನಾಡ ಮಾವು ಮತ್ತು ಹಲಸು ಸಂರಕ್ಷಣಾ ಬಳಗ ಸುಳ್ಯ, ಸಂಪಾಜೆ ಸಹಕಾರಿ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ನಾಡ ಮಾವು ಮತ್ತು ಹಲಸು ಸಂರಕ್ಷಣೆ, ಗಿಡ ಸವರುವಿಕೆ ಹಾಗೂ ಕಸಿಕಟ್ಟುವ ತರಬೇತಿ ಕಾರ್ಯಾಗಾರ

0

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಳ್ಯ ತೋಟಗಾರಿಕಾ ಇಲಾಖೆ ಹಾಗೂ ನಾಡಮಾವು ಮತ್ತು ಹಲಸು ಸಂರಕ್ಷಣಾ ಬಳಗ ಸುಳ್ಯ ಇದರ ವತಿಯಿಂದ ನಾಡಮಾವು ಮತ್ತು ಹಲಸು ಸಂರಕ್ಷಣೆ, ಗಿಡ ಸವರುವಿಕೆ ಹಾಗೂ ಕಸಿಕಟ್ಟುವ ತರಬೇತಿ ಕಾರ್ಯಾಗಾರವು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೆ.24ರಂದು ಜರುಗಲಿದೆ.

ಕಾರ್ಯಕ್ರಮವನ್ನು ಸುಳ್ಯದ ಸಹಾಯಕ ತೋಟಗಾರಿಕಾ ಅಧಿಕಾರಿ ವಿಜೇತ್ ಎಸ್. ಉದ್ಘಾಟಿಸಲಿದ್ದಾರೆ. ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸುಳ್ಯ ನಮಾಮಿ ಬಳಗದ ಜಯರಾಮ ಮುಂಡೋಳಿಮೂಲೆ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಿ.ಆರ್.ಎಫ್.ಒ. ಚಂದ್ರು ಬಿ.ಜಿ. , ಕಸಿಕಟ್ಟುವ ತರಬೇತುದಾರರಾಗಿ ಶ್ಯಾಮ್ ಭಟ್ ಕಲ್ಮಡ್ಕ, ಸೆಲ್ವೆಸ್ಟರ್ ಡಿಸೋಜ ಸಂಪಾಜೆ, ಜಗದೀಶ ಪರಮಲೆ, ಜಾಕಬ್ ಡಿಸೋಜ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕರಾದ ಜಗದೀಶ್ ಕೆ.ಪಿ. ತಿಳಿಸಿದ್ದಾರೆ.