ವೆಂಕಟರಮಣ ಸೊಸೈಟಿ ಬೆಳ್ಳಿ ಹಬ್ಬ ವರ್ಷದಲ್ಲಿ

0


ಬೆಳ್ಳಿಹಬ್ಬದ ಅಂಗವಾಗಿ ಸ್ಮರಣೀಯ ಯೋಜನೆ


ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಪಿ.ಸಿ.ಜಯರಾಮ್ ಪ್ರಕಟಣೆ


ಗೌಡರ ಯುವ ಸೇವಾ ಸಂಘದಿಂದ ಪ್ರವರ್ತಿಸಲ್ಪಟ್ಟು 1995 ರಲ್ಲಿ ಆರಂಭಗೊಂಡ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ವರ್ಷವನ್ನು ಆಚರಿಸುತ್ತಿದ್ದು,ಇದರ ಅಂಗವಾಗಿ ಸ್ಮರಣೀಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದ್ದಾರೆ.


ಸೊಸೈಟಿಯ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತಾಡಿದ ಅವರು,ಮುಂದಿನ ಆರ್ಥಿಕ ವರ್ಷದಲ್ಲಿ ೨೫೦ ಕೋಟಿ ರೂ.ಠೇವಣಿ ಸಂಗ್ರಹಿಸಿ ಸದಸ್ಯರುಗಳಿಗೆ ೨೦ ಕೋಟಿ ರೂ. ಸಾಲ ವಿತರಿಸಿ ೧೦೦೦ ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆಯನ್ನು ಹೊಂದಿದೆ. ಈ ಸಹಕಾರ ವರ್ಷದಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ೩ ಶಾಖೆಗಳನ್ನು ಆರಂಭಿಸಿ, ೨೫ ಶಾಖೆಗಳ ಗುರಿಯನ್ನು ಆಡಳಿತ ಮಂಡಳಿಯು ಹೊಂದಿದೆ.


ಸೊಸೈಟಿ ಉಪಾಧ್ಯಕ್ಷ ಮೋಹನ್‌ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ನಿರ್ದೇಶಕರುಗಳಾದ ಜಾಕೆ ಸದಾನಂದ,ನಿತ್ಯಾನಂದ ಮುಂಡೋಡಿ,ಎ.ವಿ.ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಾಮೋದರ ನಾರ್ಕೋಡು, ದಿನೇಶ್ ಮಡಪ್ಪಾಡಿ, ಶ್ರೀಮತಿ ಜಯಲಲಿತಾ ಕೆ.ಎಸ್., ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಲತಾ ಎಸ್.ಮಾವಜಿ, ಹೇಮಚಂದ್ರ ಐ.ಕೆ. ನವೀನ್‌ಕುಮಾರ್ ಜಾಕೆ ಪತ್ರಿಕಾಗೋಷ್ಠಿಯಲ್ಲಿದ್ದರು.