ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಗ್ರಾಂಡ್ ಪೆರೇಂಟ್ಸ್ ಡೇ ಆಚರಣೆ

0

ಪ್ರತಿಯೊಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ. ಹೀಗಾಗಿ ಅಂಜಲಿ ಅಕಾಡೆಮಿ ಮೊಂಟೆಸ್ಸರಿ
ಸ್ಕೂಲ್ ನಲ್ಲಿ  ಗ್ರಾಂಡ್ ಪೇರೆಂಟ್ಸ್ ಡೇ ದಿನವನ್ನು ಸೆ.16ರಂದು  ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯರಾದ ಚಂದ್ರಶೇಖರ್ ರವರು ಭಾಗವಹಿಸಿದ್ದರು. ಅದೇ ರೀತಿ ಸಂಸ್ಥೆಯ ಪುಟಾಣಿ ಮಕ್ಕಳ ಅಜ್ಜ ಅಜ್ಜಿಯಂದಿರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.

ಅಜ್ಜ ಅಜ್ಜಿಯಂದಿರಿಗೆ ಲಿಂಬೆ ಚಮಚ ಹಾಗೂ ಸಂಗೀತ ಕುರ್ಚಿ ಆಟಗಳನ್ನು ಏರ್ಪಡಿಸಲಾಗಿತ್ತು. ತಮ್ಮ ಕೈರುಚಿಯನ್ನು ಪುಟಾಣಿ ಗಳಿಗೆ ಕೈತ್ತುತ್ತು ನೀಡಿ ಸಂಭ್ರಮಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಅವರು ವಹಿಸಿದ್ದರು.
ಕೊನೆಯಲ್ಲಿ ಅಜ್ಜಿಯಂದಿರು ಮಕ್ಕಳಿಗೆ ಕಥೆ ಹೇಳಿ ಸಂತೋಷಪಟ್ಟರು.

LEAVE A REPLY

Please enter your comment!
Please enter your name here