ಪೇರಾ ಕುಟುಂಬ ಸಮ್ಮಿಲನದಲ್ಲಿ ಡಾ|| ಮಹಮ್ಮದ್ ರಮೀಝ್ ರವರಿಗೆ ಸನ್ಮಾನ

0

ಸುಳ್ಯ ಗಾಂಧಿನಗರ ಗುರುಂಪು ನಿವಾಸದ ಪೇರಾ ಕುಟುಂಬ ಸಮ್ಮಿಲನ ಇತ್ತೀಚೆಗೆ ಕೊಡಗಿನ ಕೂರ್ಗ್ ಗಾಡಾವನ ರೆಸಾರ್ಟ್ ನಲ್ಲಿ ನಡೆಯಿತು.
ಮಕ್ಕಳಿಗೆ ಮತ್ತು ಕುಟುಂಬದ ಸದಸ್ಯರಿಗೆ ಆಟೋಟ ಮತ್ತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರರಿಗೆ ಬಹುಮಾನವನ್ನು ವಿತರಿಸಲಾಯಿತು.


ಕಾರ್ಯಕ್ರಮದ ಕೊನೆಯಲ್ಲಿ ವೈದ್ಯಕೀಯ ಪದವಿ ಪಡೆದ ಅಬ್ದುಲ್ ರಹಿಮಾನ್ ಕುತ್ತಮೊಟ್ಟೆ ಮತ್ತು ರೈಹಾನ ದಂಪತಿಗಳ ಪುತ್ರ ಶಿವಮೊಗ್ಗದ ಸುಭ್ಭಯ್ಯಇನ್ಟ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಕಾಲೇಜಿನಲ್ಲಿ MBBS ಪದವಿಯನ್ನು ಪೊರೈಸಿದ ಡಾ|| ಮಹಮ್ಮದ್ ರಮೀಝ್ ರವರನ್ನು ಕುಟುಂಬದ ಹಿರಿಯ ಸದಸ್ಯರು ಶಾಲು ಹಾರ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಸಂಯೊಜನೆಯನ್ನು ಬಶೀರ್ ಸಪ್ನ,ಮಿಹ್ರಾಝ್ ಮತ್ತು ರಶೀದ್ ಚೆಂಗಳ ನೆರವೇರಿಸಿದರು.

LEAVE A REPLY

Please enter your comment!
Please enter your name here