ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಸರಕಾರಿ ಬಸ್ ನ ಅಧಿಕಾರಿಗಳೇ ಕಿರಿಕ್‌ ಮಾಡ್ತಿದ್ದಾರಾ?

0

ಮಹಿಳೆಯರ ಪ್ರಯಾಣಕ್ಕೆ ಆಧಾರ್ ಕಾಡ್೯ ಕಡ್ಡಾಯವಂತೆ – ಬೇರೆ ಗುರುತಿನ ಚೀಟಿ ಆಗೋದೆ ಇಲ್ಲವಂತೆ..

ಆಧಾರ್ ಕಾಡ್೯ ಇಲ್ಲದಿದ್ದರೆ ನಿರ್ವಾಹಕರಿಗೆ ಚೆಕ್ಕ್ಂಗ್ ನವರಿಂದ ಫೈನ್…!

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಸರಕಾರಿ‌ ಬಸ್ ನ ಅಧಿಕಾರಿಗಳೇ ಕಿರಿಕ್ ಮಾಡುತ್ತಿದ್ದಾರೆಂಬ ಆರೋಪ ಇದೀಗ ಕೇಳಿ ಬರುತ್ತಿದೆ.

ಸರಕಾರಿ ಬಸ್ಸಿನಲ್ಲಿ ಮಹಿಳೆಯರು ಪ್ರಯಾಣಿಸಲು ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಕಾಡ್೯, ವೋಟರ್ ಐಡಿ ಯಂತಹ ಅಧಿಕೃತ ಗುರುತಿನ ಚೀಟಿ ಇದ್ದರೆ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇದೀಗ ಕೆಲ ಬಸ್ ನಿರ್ವಾಹಕರು ಮಹಿಳೆಯರಲ್ಲಿ ಆಧಾರ್ ಕಾಡ್೯ ಕಡ್ಡಾಯವಾಗಿ ತೋರಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನಿರ್ವಾಹಕರೊಬ್ಬರಲ್ಲಿ ಈ ಬಗ್ಗೆ ವಿಚಾರಿಸಿದಾಗ “ನಮಗೆ ಮೇಲಾಧಿಕಾರಿಗಳು ಆಧಾರ್ ಕಾಡ್೯ ಕಡ್ಡಾಯವೆಂದು ಹೇಳಿದ್ದಾರೆ. ಒಂದು‌ ವೇಳೆ ಚೆಕ್ಂಗ್ ನವರು ಬಂದ್ರೆ ಟಿಕೆಟ್ ಪಡೆದ ಮಹಿಳೆಯರಲ್ಲಿ ಆಧಾರ್ ಕಾಡ್೯ ಇಲ್ಲದಿದ್ದರೆ ನಮಗೆ ಫೈನ್ ಹಾಕ್ತಾರೆ. ಇಲ್ಲದಿದ್ದರೆ ನಮ್ಮನ್ನು ರಜೆಯಲ್ಲಿ ಕಳಿಸ್ತಾರೆ” ಎನ್ನುತ್ತಾರೆ.
ಹೀಗಾಗಿ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ಅಧಿಕಾರಿಗಳೇ ಅಡ್ಡಿ ಪಡಿಸುತ್ತಿದ್ದಾರೆಂದು ಕೆಲ ಮಹಿಳೆಯರು ಆರೋಪಿಸಿದ್ದಾರೆ.

ಸರಕಾರದ ಆದೇಶದ ಪ್ರಕಾರ ಅಧಿಕೃತ ಗುರುತಿನ ಚೀಟಿ ಆಧಾರ್ ಕಾಡ್೯ ಬದಲು ವೋಟಾರ್ ಐಡಿ ತೋರಿಸಿದರೂ ಬಸ್ಸಿನಲ್ಲಿ ಮಹಿಳೆಯರು ಪ್ರಯಾಣಿಸಬಹುದು ಎಂದಿದ್ದರೂ, ಕೆಲ ಅಧಿಕಾರಿಗಳು ಆಧಾರ್ ಕಾಡ್೯ ಮಾತ್ರ ಎಂಬ ಕಡ್ಡಾಯದ ಸೂಚನೆಯಿಂದ ನಿರ್ವಾಹಕರು ಆಧಾರ್ ಕಾಡ್೯ ಬಿಟ್ಟು ಉಳಿದ ಯಾವುದೇ ಗುರುತಿನ ಚೀಟಿಯನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾರಣ ಅನೇಕ‌ ಮಹಿಳೆಯರು ಶಕ್ತಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಇಂದು ಬೆಳಿಗ್ಗೆ ಸುಬ್ರಹ್ಮಣ್ಯ – ಧರ್ಮಸ್ಥಳ ಬಸ್ಸಿನಲ್ಲಿ ಇದೇ ವಿಚಾರದ ಬಗ್ಗೆ ನಿರ್ವಾಹಕರು ಮತ್ತು ಮಹಿಳೆಯರ ಮಧ್ಯೆ ಮಾತಿನ ಚಕಾಮಕಿಗಳು ನಡೆದಿದೆ.

ಹೀಗಾಗಿ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಸೂಕ್ತ‌ ಕ್ರಮಕೈಗೊಳ್ಳಬೇಕಿದೆ.