








ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಬಳ್ಳಕ್ಕ ಇದರ ಆಶ್ರಯದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 19ರಂದು ಬಳ್ಳಕ್ಕ- ಹರಿಪುರ ಸ.ಕಿ.ಪ್ರಾ. ಶಾಲಾ ವಠಾರದಲ್ಲಿ ನಡೆಯುತ್ತಿದೆ.
ಬೆಳಿಗ್ಗೆ ಗಣಪತಿ ಪ್ರತಿಷ್ಠೆ ನಡೆಯಿತು. ಬಳಿಕ ಭಜನೆ, ರಂಗಪೂಜೆ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಭೋಜನ ನಡೆಯಿತು. ಅಪರಾಹ್ನ ಶೋಭಾಯಾತ್ರೆ, ಗಣೇಶ ವಿಸರ್ಜನೆ ನಡೆಯಲಿದೆ. ಸಂಜೆ 6.30ಕ್ಕೆ ಬಹುಮಾನ ವಿತರಣೆ, 7.30ರಿಂದ ಗಯಾಪದ ಕಲಾವಿದರು ಉಪ್ಪಿನಂಗಡಿ ಇವರಿಂದ ತುಳು ಹಾಸ್ಯಮಯ ನಾಟಕ ಮುರಳಿ ಈ ಪಿರ ಬರೋಳಿ ನಡೆಯಲಿದೆ.









