ದುಗ್ಗಲಡ್ಕದಲ್ಲಿ ಸಾರ್ವಜನಿಕ ಗಣೇಶೋತ್ಸವ – ಧಾರ್ಮಿಕ ಸಭೆ

0

ಗಣೇಶೋತ್ಸವಗಳಿಂದ ಹಿಂದೂ ಸಮಾಜದ ಸಂಘಟನೆ: ಅರುಣ್ ಕುಮಾರ್ ಪುತ್ತಿಲ

ಗಣೇಶನ ವೈಭವದ ಶೋಭಾಯಾತ್ರೆ

ಹಿಂದೂ ಸಮಾಜದ ಮೇಲೆ, ನಂಬಿಕೆಯ ಮೇಲೆ,ಶ್ರದ್ಧಾ ಕೇಂದ್ರಗಳ ಮೇಲೆ ಸವಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು,ಧರ್ಮವನ್ನು ಉಳಿಸುವ ಸಂಕಲ್ಪ ನಾವೆಲ್ಲ ಮಾಡಬೇಕು.ಇಂತಹ ಗಣೇಶೋತ್ಸವಗಳಿಂದ ಹಿಂದೂ ಸಮಾಜದ ಸಂಘಟನೆ ಸಾಧ್ಯ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ಸಭಾಭವನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಹಿಂದೂ ಸಮಾಜಕ್ಕೆ ತೊಂದರೆಯಾದಾಗ ಪಲಾಯನ ಮಾಡದೆ ಎದುರಿಸುವ ಶಕ್ತಿ ಬಂದಾಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ನೂರಾರು ಗಣೇಶೋತ್ಸವ ನಡೆಯಲು ಸಾಧ್ಯ.ಹಿಂದೂ ಸಮಾಜ ಧರ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್ ಕೊಡೆಂಚಡ್ಕ, ನ.ಪಂ.ಸದಸ್ಯ ಬಾಲಕೃಷ್ಣ ರೈ, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುದ್ಪಾಜೆ, ಗುಳಿಗನ ಕಟ್ಟೆ ಸಮಿತಿ ಅಧ್ಯಕ್ಷ ದಿನೇಶ್ ಡಿ.ಕೆ., ದುಗ್ಗಲಾಯ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ ,

ಬೆಂಗಳೂರು ಟಾಟಾ ಪವರ್ ಸೋಲಾರ್ ಕಂಪೆನಿ ಉದ್ಯೋಗಿ ಶಿವಪ್ರಸಾದ್ ಕೊಯಿಕುಳಿ ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ವತಿಯಿಂದ ಅರುಣ್ ಕುಮಾರ್ ಪುತ್ತಿಲರವರನ್ನು ಸನ್ಮಾನಿಸಲಾಯಿತು. ಯುವ ಕಲಾವಿದ ಅಮೃತ್ ಸಾಲಿಯಾನ್ ರಚಿಸಿದ ಪುತ್ತಿಲರವರ ಭಾವಚಿತ್ರವನ್ನು ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ ಸ್ವಾಗತಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಬಳಿಕ ಗಣೇಶನ ವೈಭವದ ಮೆರವಣಿಗೆ ಸಾಗಿ ಕಂದಡ್ಕ ಹೊಳೆಯಲ್ಲಿ ಜಲಸ್ಥಂಭನಗೊಳಿಸಲಾಯಿತು.