ಗಣೇಶ ಚತುರ್ಥಿ ಲಕ್ಕಿ ಕೂಪನ್ ನಲ್ಲಿ ‘ಮದ್ಯ’ ಬಹುಮಾನ

0

ಹಳೆಗೇಟು’ ಎಂದು ಹಾಕಿದ್ದರಿಂದ ನಮ್ಮ ಸಂಘಕ್ಕೆ ಕಪ್ಪು ಚುಕ್ಕೆ : ನ್ಯಾಯ ಕೊಡಿಸುವಂತೆ ಸಾಂಸ್ಕೃತಿಕ ಸಂಘ ಹಳೆಗೇಟು ಪೋಲೀಸ್ ಮೊರೆ

ಗಣೇಶ ಚತುರ್ಥಿ ಲಕ್ಕಿಕೂಪನ್ ನಲ್ಲಿ ‘ಮದ್ಯ’ ಬಹುಮಾನ ವಿಟ್ಟು ಹಳೆಗೇಟು ಎಂದು ಹಾಕಿರುವುದರಿಂದ ನಮ್ಮ ಸಂಘಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರದಂತೆ ಕಾಣುತಿದ್ದು, ಈ ರೀತಿ ಮಾಡಿದವರನ್ನು ಪತ್ತೆ ಮಾಡಿ ನಮಗೆ ನ್ಯಾಯ ಕೊಡಿಸಬೇಕಾಗಿ ಹಳೆಗೇಟಿನ ಸಾಂಸ್ಕೃತಿಕ ಸಂಘ ಸುಳ್ಯ ಪೋಲೀಸರನ್ನು ಕೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ಗಣೇಶ ಚತುರ್ಥಿ ಪ್ರಯುಕ್ತ ಲಕ್ಕಿಕೂಪನ್ ಒಂದು ವೈರಲ್ ಆಗುತಿದ್ದು ಇದರಲ್ಲಿ ಬಹುಮಾನವಾಗಿ ಬ್ಲ್ಯಾಕ್ ಆ್ಯಂಡ್ ವೈಟ್ ಮತ್ತು ಯು.ಬಿ.‌ ಬೀರ್ ಒಂದು ಕೇಸ್ ಎಂದು ಮುದ್ರಿಸಿ, ಡ್ರಾ.19.09.2023 ರಂದು ಡ್ರಾ, ಸ್ಥಳ ಹಳೆಗೇಟು ಎಂದು ಮುದ್ರಿಸಲಾಗಿತ್ತು. ಇದರಲ್ಲಿ ಒಂದು ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಳೆಗೇಟು ಪರಿಸರಸಲ್ಲಿ ಗಣೇಶ ಚತುರ್ಥಿ ಆಚರಣೆ ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುತ್ತಿದೆ. ಈ ರೀತಿಯ ಲಕ್ಕಿ ಕೂಪನ್ ಹರಿದಾಡುತ್ತಿದ್ದು ಅದರಲ್ಲಿ ಹಳೆಗೇಟು ಎಂದು ಹಾಗೂ ಗಣೇಶ ಚತುರ್ಥಿ ಎಂದು ಇರುವುದರಿಂದ ಸಾಂಸ್ಕೃತಿಕ ಸಂಘದವರಿಗೆ ಕೆಲವರು ಕರೆ ಮಾಡಿ ವಿಚಾರಿಸುತ್ತಿರುವುದಾಗಿಯೂ ಇದರಿಂದ ಕಿರಿ ಕಿರಿಯಾಗಿರುವ ಸಂಘದವರು ಈ ಲಕ್ಕಿಕೂಪನ್ ಮಾಡಿ ಹಂಚಿರುವ ನೈಜ ವ್ಯಕ್ತಿಗಳನ್ನು ಪತ್ತೆ ಮಾಡಿ ನ್ಯಾಯ ಕೊಡಿಸಬೇಕೆಂದು‌ ಸಾಂಸ್ಕ್ರತಿಕ ಸಂಘ‌ ಹಳೆಗೇಟಿನವರು ಪೋಲೀಸ್‌ ಮೆಟ್ಟಿಲೇರಿದ್ದಾರೆ.

“ನಾವು ಮಾಡದ ತಪ್ಪಿಗೆ‌ ಕೆಲವರು ಫೋನ್ ಮಾಡಿ ನಮ್ಮನ್ನು ವಿಚಾರಿಸುತ್ತಿದ್ದಾರೆ. ಇದರಿಂದ ತೀರಾ ಕಿರಿಕಿರಿಯಾಗಿದೆ. ಆ ಲಕ್ಕಿ ಕೂಪನ್ ಮಾಡಿದವರನ್ನು ಪತ್ತೆ ಮಾಡಬೇಕೆಂದು ಪೋಲೀಸರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಹಳೆಗೇಟು ಸಾಂಸ್ಕೃತಿಕ ಸಂಘದವರು ಸುದ್ದಿಗೆ ತಿಳಿಸಿದ್ದಾರೆ.