ಬೆಳ್ಳಾರೆ : ವಿರಾಟ್ ಫ್ರೆಂಡ್ಸ್ ವತಿಯಿಂದ ಬೆಳ್ಳಾರೆಯಲ್ಲಿ ವಿಜೃಂಭಿಸಿದ ಶ್ರೀ ಗಣೇಶೋತ್ಸವ

0

ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆ – ಸಾವಿರಾರು ಜನ ಭಾಗಿ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ,ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ಶ್ರೀ ಗಣೇಶೋತ್ಸವವು ಸೆ.19 ಮತ್ತು ಸೆ.20 ರಂದು ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.


ಇಂದು ಸಂಜೆ ಶ್ರೀ ದೇವರಿಗೆ ಮಹಾಪೂಜೆ,ಮಂಗಳಾರತಿ ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದೇವರ ಶೋಭಾಯಾತ್ರೆಯು ವಿಜೃಂಭಣೆಯಿಂದ ನಡೆಯಿತು.


ಶೋಭಾಯಾತ್ರೆಯು ಫ್ರೆಂಡ್ಸ್ ಟೈಗರ್ ಬೆಳ್ಳಾರೆ ಯ ಹುಲಿವೇಷದ ಕುಣಿತ ತಂಡ, ಗೋಪಾಲಕೃಷ್ಣ ಗೊಂಬೆ ಬಳಗ ಎಡಮಂಗಲ, ಸಿಡಿಮದ್ದು ಪ್ರದರ್ಸದನ, ಬ್ಯಾಂಡ್ ವಾದ್ಯದ ಅಬ್ಬರ,ವಿವಿಧ ವೇಷಭೂ಼ಗಳ ಕುಣಿತದೊಂದಿಗೆ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಸಾಗಿ ಗೌರಿಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ಮಿಥುನ್ ಶೆಣೈ, ಅಧ್ಯಕ್ಷ ಸಂತೋಷ್ ಮಣಿಯಾಣಿ ಬೆಳ್ಳಾರೆ, ಕಾರ್ಯದರ್ಶಿ ಜೀವನ್ ಕಾವಿನಮೂಲೆ,ಕೋಶಾಧಿಕಾರಿ ನಂದನ ಉಜ್ರೋಳಿ ಹಾಗೂ ಸರ್ವಸದಸ್ಯರು ಮತ್ತು ಸಾವಿರಾರು ಜನ ಭಕ್ತಾದಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.