ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಳಿ ಪ್ರಶಸ್ತಿ

0

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕೊಡಮಾಡುವ ಕೊಡಗು ಜಿಲ್ಲಾ 2022-23 ರ ಸಾಲಿನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿನ ಕಾರ್ಯ ನಿರ್ವಹಣೆಗಾಗಿ ನೀಡುವ ಪ್ರಶಸ್ತಿ ಅಲ್ಲಿ ದ್ವಿತೀಯ ಸ್ಥಾನವನ್ನು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘವು ಪಡೆದುಕೊಂಡಿದ್ದು, ಕರ್ನಾಟಕ ಅಪೆಕ್ಸ್ ಬ್ಯಾಂಕ್ ನೀಡುವ ಉತ್ತಮ ಸೇವೆ ಮತ್ತು ದಕ್ಷ ಕಾರ್ಯನಿರ್ವಹಣೆಗಾಗಿನ ಪ್ರಶಸ್ತಿಯನ್ನು ಕೂಡ ಪಡೆದುಕೊಳ್ಳುವ ಮೂಲಕ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘವು ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸೆ.20ರಂದು ಮಡಿಕೇರಿಯಲ್ಲಿ ನಡೆದ ಕೆ.ಡಿ.ಸಿ.ಸಿ. ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕ್ ಅದ್ಯಕ್ಷರೂ ,ಅಪೆಕ್ಸ್ ಬ್ಯಾಂಕ್ ನಿರ್ದೇಶಕರೂ ಆಗಿರುವ ಕೊಡಂದೇರ ಬಾಂಡ್ ಗಣಪತಿರವರು ಪಯಸ್ವಿನಿ ಸೊಸೈಟಿ ಅದ್ಯಕ್ಷ ಎನ್.ಸಿ. ಅನಂತ ಊರುಬೈಲು, ಉಪಾಧ್ಯಕ್ಷ ರಾಜಾರಾಮ ಕಳಗಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ .ಬಿ.ಕೆ ಆನಂದರವರಿಗೆ ನಗದು ಸಹಿತ ಪ್ರಶಸ್ತಿ ಪ್ರಧಾನ ಮಾಡಿದರು.
ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಎನ್.ಸಿ. ಅನಂತ ಊರುಬೈಲು ಅವರ ಅಧ್ಯಕ್ಷತೆಯಲ್ಲಿ ಸರ್ವರ ಸಹಕಾರದೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರಶಸ್ತಿ ಗಳಿಸಿಕೊಂಡು ಬರುತ್ತಿದೆ.