ಅಯ್ಯನಕಟ್ಟೆಯಲ್ಲಿ ರವಿಪ್ರಸಾದ್ ರೈಯವರ ಗ್ರಾಮ ವನ್ ಜನಸೇವಾ ಕೇಂದ್ರ ಸೆ. 19ರಂದು ಸಂಕಪ್ಪ ರೈಯವರ ಕಟ್ಟಡದಲ್ಲಿ ಶುಭಾರಂಭಗೊಂಡಿತು.















ಶಾಸಕಿ ಕು. ಭಾಗೀರಥಿ ಮುರುಳ್ಯ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ ಮಣಿಮಜಲು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕರಾದ ಎನ್. ವಿಶ್ವನಾಥ ರೈ ಕಳಂಜ, ನಿರ್ದೇಶಕರಾದ ಅಜಿತ್ ರಾವ್ ಕಿಲಂಗೋಡಿ, ಭಾರತೀಶಂಕರ ಆದಳ, ಶುಭಕುಮಾರ್ ಬಾಳೆಗುಡ್ಡೆ, ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಗೌರವಾಧ್ಯಕ್ಷ ರಘುನಾಥ ರೈ ಕಳಂಜ, ಕಟ್ಟಡ ಮಾಲಕರಾದ ಸಂಕಪ್ಪ ರೈ ಕಳಂಜ, ಪಂಚಾಯತ್ ಸದಸ್ಯರುಗಳಾದ ಗಣೇಶ್ ರೈ ಕಳಂಜ, ಕಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಅನಂತಕೃಷ್ಣ ತಂಟೆಪ್ಪಾಡಿ, ಶ್ರೀಮತಿ ಯಶೋಧ ಮಣಿಮಜಲು, ಅಯ್ಯನಕಟ್ಟೆ ಅ.ಹಿ.ಪ್ರಾ. ಶಾಲಾ ಎಸ್. ಡಿ.ಎಂ.ಸಿ. ಅಧ್ಯಕ್ಷ ಸತೀಶ್ಚಂದ್ರ ಅಯ್ಯನಕಟ್ಟೆ ಸೇರಿದಂತೆ ರವಿಪ್ರಸಾದ್ ರೈಯವರ ಮನೆಯವರು, ಬಂಧುಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









