ಅರಂತೋಡು: ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ

0

ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟವು ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅರಂತೋಡು ಗ್ರಾ. ಪಂ. ಅಧ್ಯಕ್ಷ ಕೇಶವ ಅಡ್ತಲೆ ಉದ್ಘಾಟಿಸಿ, ಶುಭಹಾರೈಸಿದರು. ನಿವೃತ ದೈಹಿಕ ಶಿಕ್ಷಕ ಎ.ಸಿ.ವಸಂತ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನೆ.ಸ್ಮಾ.ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ, ಪ್ರೌಢಶಾಲಾ ಮುಖ್ಯಪಾಧ್ಯಾಯ ಸೀತಾರಾಮ, ಗ್ರಾ.ಪಂ. ಸದಸ್ಯ ಪುಷ್ಪಾಧರ, ದೈಹಿಕ ಶಿಕ್ಷಕ ಧನಂಜಯ, ಸೇರಿದಂತೆ ಶಾಲಾ ಸಹಶಿಕ್ಷಕ ವೃಂದದವರು ಉಪಸ್ಥಿತರಿದ್ದರು.