ಕುಂಟಿಕಾನ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ

0

ಅಮರ ಮುಡ್ನೂರು ಗ್ರಾಮದ ಕುಂಟಿಕಾನ ಅಗ್ರವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಸ್ತ್ರೀ ಶಕ್ತಿ ಗುಂಪು ಬಾಲ ವಿಕಾಸ ಸಮಿತಿಯ ಆಶ್ರಯದಲ್ಲಿ ಮಾಸಾಚರಣೆಯನ್ನು ಆಚರಿಸಲಾಯಿತು. ವಿವಿಧ ಆಹಾರ ಖಾದ್ಯಗಳನ್ನು ತಯಾರಿಸಿ, ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಿ ಮಾಹಿತಿ ನೀಡಲಾಯಿತು. ಔಷಧಿಯ ಗಿಡಗಳ ಪ್ರದರ್ಶನ ಮತ್ತು ಉಪಯೋಗದ ಬಗ್ಗೆ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ವಿಜಯ ರವರು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿಯರು ಸಹಕರಿಸಿದರು.