ಸುಳ್ಯ ರೋಟರಿ ಶಾಲೆಯ ಎದುರು ಬೈಕ್ ಮತ್ತು ಸ್ಕೂಟಿ ನಡುವೆ ಡಿಕ್ಕಿ- ಸವಾರನಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

0

ಸುಳ್ಯ ರಥಬೀದಿಯ ರೋಟರಿ ಶಾಲೆಯ ಎದುರುಗಡೆ ಕೆ.ವಿ.ಜಿ.ಕಡೆಯಿಂದ ಬರುತ್ತಿದ್ದ ಪಲ್ಸರ್ ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವರದಿಯಾಗಿದೆ.

ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಹಿಂಬದಿ ಸವಾರ ಸೇರಿ ಮೂವರು ಗಂಭೀರಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಘಟನೆ ಸಂಭವಿಸಿದ ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಇಬ್ಬರನ್ನು ಕಾರಿನಲ್ಲಿ ಮತ್ತು ಓರ್ವ ಸವಾರನನ್ನು ಅಟೋ ರಿಕ್ಷಾದಲ್ಲಿ ಕೆ.ವಿ.ಜಿ ಆಸ್ಪತ್ರೆಗೆದಾಖಲಿಸಿದ್ದು ಸ್ಕೂಟಿ ಸವಾರನನ್ನು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಸ್ಕೂಟಿ ಸವಾರ ಪೂರ್ಣಿಮಾ ಟ್ರಾವೆಲ್ಸ್ ಸಿಬ್ಬಂದಿ ಶರತ್ ಉಬರಡ್ಕ ಮತ್ತು ಬೈಕ್ ಸವಾರರಿಬ್ಬರು ಕೇರ್ಪಳ ಬೂಡು ನಿವಾಸಿಗಳೆಂದು ತಿಳಿದು ಬಂದಿದೆ.
ಬೈಕ್ ಮತ್ತು ಸ್ಕೂಟರ್ ಮುಂಭಾಗ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ರಸ್ತೆಯ ಮೇಲೆ ರಕ್ತ ಚೆಲ್ಲಿತ್ತು. ಸ್ವಲ್ಪ ಹೊತ್ತಿನಲ್ಲಿಗಾಂಧಿನಗರದಿಂದ ಹಿಂತಿರುಗಿ ಬರುತ್ತಿದ್ದಗಣೇಶೋತ್ಸವದ ಶೋಭಾಯಾತ್ರೆಯು
ರಥಬೀದಿಯಲ್ಲಿ ಬರಲಿರುವುದರಿಂದ
ಪೋಲಿಸರ ಸಮ್ಮುಖದಲ್ಲಿ ರಸ್ತೆಗೆ ನೀರು ಹಾಕಿ ಸ್ವಚ್ಛಗೊಳಿಸಲಾಯಿತು.