ಸುಳ್ಯ ಗಣೇಶೋತ್ಸವದ ಭಕ್ತಿ ಸಂಭ್ರಮದ ಶೋಭಾಯಾತ್ರೆ-ಆಕರ್ಷಕ ಕುಣಿತ ಭಜನೆ ,ಹುಲಿವೇಷ ಕುಣಿತ

0

ಸುಳ್ಯ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ
55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೈಭವದ ವಿಸರ್ಜನಾ ಶೋಭಾಯಾತ್ರೆಯು ಸೆ.23 ರಂದು ನಡೆಯಿತು.

ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ವಿಶೇಷವಾಗಿ ಲೋಕ ಕಲ್ಯಾಣಾರ್ಥ 108 ತೆಂಗಿನ ಕಾಯಿ ಗಣಪತಿ ಹವನ ಚೆನ್ನಕೇಶವ ದೇವಳದ ಆವರಣದಲ್ಲಿ ನೆರವೇರಿತು. ಬಳಿಕ ಮಹಾಪೂಜೆ ಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಅಪರಾಹ್ನ ಅಲಂಕೃತ ಮಂಟಪದಲ್ಲಿ ಶ್ರೀ ಗಣೇಶನ ವೈಭವದ ವಿಸರ್ಜನಾ ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ಜೆ.ಸಿ.ರಸ್ತೆಯಾಗಿ ಒಡಬಾಯಿ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಗಾಂಧಿನಗರ ವಿಷ್ಣು ಸರ್ಕಲ್ ಅಶ್ವಥ ಕಟ್ಟೆಗೆ ಸುತ್ತು ಹಾಕಿ ರಥಬೀದಿಯ ಮೂಲಕ ಸಾಗಿ ಬಂದು ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ವಿಶೇಷವಾಗಿ ಆಕರ್ಷಕ ಪುರುಷರ,‌ಮಹಿಳೆಯರ ಮತ್ತು ‌ಮಕ್ಕಳ ಕುಣಿತ ಭಜನೆ, ಯುವಕರ ಹುಲಿ ವೇಷ ಕುಣಿತ, ಬ್ಯಾಂಡ್ ಸೆಟ್ ಸಿಡಿ ಮದ್ದಿನ ಪ್ರದರ್ಶನ ಆಕರ್ಷಕ ವಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಶೋಭಾಯಾತ್ರೆ ಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಹಣ್ಣು ಕಾಯಿ ಮಂಗಳಾರತಿ ಸೇವೆ ಮಾಡಿಸಿದರು. ಶೋಭಾಯಾತ್ರೆಯಲ್ಲಿ ‌ಸಾಗಿ ಬಂದ ಎಲ್ಲಾ ಭಕ್ತಾದಿಗಳಿಗೆ ಸಂಜೆ ಶ್ರೀಮತಿ ಲತಾಮಧುಸೂದನ್ ರವರು ಉಪಹಾರದ ವ್ಯವಸ್ಥೆ ಮಾಡಿದರು. ಪಾನಕ ಮತ್ತು ಬಾದಾಮ್ ಮಾಲ್ಟ್ ವ್ಯವಸ್ಥೆ ಲೋಕೇಶ್ ಮಣಿಯಾಣಿ ಯವರು ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಾಗಿ ಬಂದರು.