ಕುಂಚಡ್ಕದ ತವರು ಮನೆಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕಿ ರಾಧಮ್ಮರಿಗೆ ಸಾಂಪ್ರದಾಯಿಕ ಅಭಿನಂದನೆ

0

ದ.ಕ ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಗೆ ಪುರಸ್ಕೃತ ರಾದ ಬೊಳುಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಮ್ಮ ಹೊನ್ನಪ್ಪ ಗೌಡ ರವರನ್ನು ತವರು ಮನೆ ಕುಂಚಡ್ಕದಲ್ಲಿ ಅ.1 ರಂದು ಸಾಂಪ್ರದಾಯಿಕವಾಗಿ ಅಭಿನಂದಿಸಲಾಯಿತು.

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉದ್ಯೋಗಿ ಪೂವಯ್ಯ ಗೌಡ ಕುಂಚಡ್ಕ ರವರುಬಿಲ್ಲರಮಜಲಿನಲ್ಲಿರುವ ತನ್ನ ಸ್ವಗೃಹದಲ್ಲಿ ಸಹೋದರಿ ಶಿಕ್ಷಕಿ ಶ್ರೀಮತಿ ರಾಧಮ್ಮ ಮತ್ತು ಹೊನ್ನಪ್ಪ ಗೌಡ ಅಜಡ್ಕ ದಂಪತಿ ಯವರನ್ನು ಕುಟುಂಬದ ಹಿರಿಯರ ಕಿರಿಯರ ಸಮ್ಮುಖದಲ್ಲಿ ಶಾಲು, ಹಾರ, ಪೇಟ, ಫಲಪುಷ್ಪ ಸ್ಮರಣಿಕೆಯನ್ನು ನೀಡಿ ಸಂಪ್ರದಾಯದಂತೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ರಾಧಮ್ಮ ರವರ ತಾಯಿ ಶ್ರೀಮತಿಪೂವಮ್ಮಜನಾರ್ಧನ ಗೌಡ ಕುಂಚಡ್ಕ, ಸಹೋದರ ರಾಮಚಂದ್ರ ಗೌಡ ಕುಂಚಡ್ಕ,ಕುಂಚಡ್ಕ ಕುಟುಂಬದ ಯಜಮಾನ ದೊಡ್ಡಯ್ಯಗೌಡಕುಂಚಡ್ಕ,ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ವೀರಪ್ಪಗೌಡಮೊಟ್ಟೆಮನೆ, ನಿವೃತ್ತ ಮುಖ್ಯ ಶಿಕ್ಷಕ ಕೊರಗಪ್ಪ ಮಾಸ್ತರ್ ಕುಂಚಡ್ಕ,ನಿವೃತ್ತ ಪ್ರಾಂಶುಪಾಲ ಮನಮೋಹನಮುಡೂರು,ಮಾಜಿ ತಾ.ಪಂ.ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂ.ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ,

ಪಂ.ಸದಸ್ಯೆ ಕುಸುಮಾವತಿ ಬಿಲ್ಲರಮಜಲು, ಶ್ರೀಮತಿ ಪಾರ್ವತಿ ಕುಂಚಡ್ಕ,
ಶ್ರೀಮತಿ ಭಾಗೀರಥಿ ಕುಂಚಡ್ಕ, ಶಿಕ್ಷಕಿಯ ಪುತ್ರಿಯರಾದ ಶುಭ ಮತ್ತುಶುಚಿಉಪಸ್ಥಿತರಿದ್ದರು.ಕು.ಸಾಯಿನಕ್ಷತ್ರ ಪ್ರಾರ್ಥಿಸಿದರು. ಪೂವಯ್ಯ ಗೌಡ ಕುಂಚಡ್ಕ ಸ್ವಾಗತಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಆಗಮಿಸಿದ ಕುಟುಂಬದ ಸದಸ್ಯರು ಬಂಧು ಮಿತ್ರರು ಶಿಕ್ಷಕಿ ರಾಧಮ್ಮ ರವರನ್ನು ಪುಷ್ಪ ಗುಚ್ಛ ನೀಡಿ ಅಭಿನಂದಿಸಿದರು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.