ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಅ.02 ರಂದು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ರೆವೆರೆಂಟ್ ಫಾದರ್ ವಿಕ್ಟರ್ ಡಿಸೋಜಾ, ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ ದೀಪ ಬೆಳಗಿಸಿ ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಭಾವಚಿತ್ರಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು.

ಇವರೊಂದಿಗೆ ವಿದ್ಯಾರ್ಥಿ ನಾಯಕರು,ಎಲ್ಲಾ ಶಿಕ್ಷಕ ವೃಂದದವರು ಜೊತೆಗೂಡಿದರು. ಗಾಂಧೀ ಜಯಂತಿಯ ಪ್ರಯುಕ್ತ ಸ್ಕೌಟ್ಸ್,ಗೈಡ್ಸ್,ಕಬ್ಸ್, ಬುಲ್ ಬುಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸಿದರು. 5 ನೇ ತರಗತಿಯ ಧನುಷ್ ಗಾಂಧಿ ಜಯಂತಿಯ ಬಗ್ಗೆ ಮಾತನಾಡಿದರು. ಬುಲ್ ಬುಲ್ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.

ಮುಖ್ಯ ಶಿಕ್ಷಕಿ ಹಾಗೂ ಶಾಲಾ ಸಂಚಾಲಕರಾದ ರೆವೆರೆಂಟ್ ಫಾದರ್ ವಿಕ್ಟರ್ ಡಿಸೋಜಾ ರವರು ಗಾಂಧೀಜಿಯವರ ಆದರ್ಶ ಗುಣಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಂಚಾಲಕರು ಮುಖ್ಯ ಶಿಕ್ಷಕಿ,

ಶಿಕ್ಷಕ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ವಿದ್ಯಾರ್ಥಿಗಳಾದ ತಮನ್ನಾ ಎಂಟನೇ ತರಗತಿ ಸ್ವಾಗತಿಸಿ,ಆರನೇ ತರಗತಿಯ ಲಕ್ಷಜಿತ್ ವಂದಿಸಿದರು. ವಿಹಾನಿ ಜಾಕೆ ಎಂಟನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ ಮುಂಭಾಗ ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಆಗಮಿಸಿದ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.