ನಡುಗಲ್ಲು ಶಾಲೆಯಲ್ಲಿ ಗಾಂಧಿ ಜಯಂತಿ, ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು 154ನೇ “ಮಹಾತ್ಮ ಗಾಂಧಿ ಜಯಂತಿ “ಹಾಗೂ 119ನೇ” ಲಾಲ್ ಬಹುದ್ದೂರ್ ಶಾಸ್ತ್ರಿ”ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಚಂದ್ರಶೇಖರ್ ಪಾರೆಪ್ಪಾ ಡಿ ಅವರು ಸರ್ವರನ್ನು ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ದಿನದ ಮಹತ್ವವನ್ನು ತಿಳಿಸಿದರು.

ಶಿಕ್ಷಕಿ ಕುl ಸುಧಾರಾಣಿ ಈ ಇಬ್ಬರು ಮಹಾನ್ ವ್ಯಕ್ತಿಗಳ ಜೀವನದ ಘಟನೆಗಳನ್ನು ಕಥಾರೂಪವಾಗಿ ತಿಳಿಯಪಡಿಸಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳವ ಮೂಲಕ ಮಹಾತ್ಮರಾಗೋಣ ಎಂದು ಕರೆ ನೀಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ದಿನದ ವಿಶೇಷವಾಗಿ ಶಾಲಾ ಆವರಣ, ಅಕ್ಷರದಾಸೋಹ ಕೊಠಡಿ ಶುಚಿತ್ವ, ತರಕಾರಿ ತೋಟ ನಿರ್ಮಾಣ ಮಾಡಲಾಯಿತು.