ಸುಳ್ಯ : ಗಾಂಧಿ ಚಿಂತನ ವೇದಿಕೆ ಹಾಗೂ ವಿವಿದ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸುಳ್ಯ ನಗರದಿಂದ ಕೋಡಿಯಾಲಬೈಲಿನವರೆಗೆ ಗಾಂಧಿ ನಡಿಗೆ

0

ನೆಹರು ಮೆಮೋರಿಯಲ್ ಕಾಲೇಜಿನ ಎನ್. ಎಸ್. ಎಸ್ ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್.ಎಸ್ ಘಟಕ, ಪಶು ಸಂಗೋಪನಾ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಸುಳ್ಯ ವಲಯಾರಣ್ಯ ಇಲಾಖೆ, ಸುದ್ದಿ ಬಿಡುಗಡೆ ಬಳಗ, ಕನ್ನಡ ಸಾಹಿತ್ಯ ಪರಿಷತ್, ಕಪಿಲ ಯುವಕ ಮಂಡಲ ಜಟ್ಟಿಪಳ್ಳ, ಮಾನಸ ಮಹಿಳಾ ಮಂಡಳ ಜಟ್ಟಿಪಳ್ಳ, ಸಿಟಿ ಫ್ರೆಂಡ್ಸ್ ಜಟ್ಟಿಪಳ್ಳ, ವಿಷ್ಣು ಯುವಕ ಮಂಡಲ ಕೊಡಿಯಾಲಬೈಲ್, ವರಲಕ್ಷ್ಮಿ ಮಹಿಳಾ ಮಂಡಲ ಕೊಡಿಯಾಲಬೈಲ್, ಮಹಾಮ್ಮಾಯಿ ಸೇವಾ ಸಮಿತಿ ಕೊಡಿಯಾಲಬೈಲ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅ. ೨ರಂದು ಸುಳ್ಯ ನಗರದಿಂದ ಕೊಡಿಯಾಲಬೈಲಿನಲ್ಲಿರುವ ಗಾಂಧಿವನದವರೆಗೆ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಸುಳ್ಯ ನಗರದ ಮುಖ್ಯ ರಸ್ತೆಯ ಬದಿಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್ ಎದುರು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರರವರು ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹಾಗೂ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಈರಯ್ಯ ದುಂತೂರುರವರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವುದರ ಮೂಲಕ ಗಾಂಧಿ ನಡಿಗೆಗೆ ಚಾಲನೆ ನೀಡಿದರು.

ಗಾಂಧಿ ನಡಿಗೆ ಕಾರ್ಯಕ್ರಮವು ಬಸ್ ನಿಲ್ದಾಣದಲ್ಲಿರುವ ಕುರುಂಜಿ ಪ್ರತಿಮೆಗೆ ಒಂದು ಸುತ್ತು ಹಾಕಿ ಬಳಿಕ, ಕೊಡಿಯಾಲಬೈಲಿನಲ್ಲಿರುವ ಗಾಂಧಿ ವನದವರೆಗೆ ಮೆರವಣಿಗೆ ಸಾಗಿತು.

ಅಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಚಂದ್ರ ಗೌಡರಿಂದ ಗಾಂಧಿ ಚಿಂತನ ಉಪನ್ಯಾಸ ನಡೆಯಿತು.

ಬಳಿಕ ಗಾಂಧಿ ವನದಲ್ಲಿರುವ ೧೫೦೦ ಗಿಡಗಳಿಗೆ ಗೊಬ್ಬರ ಹಾಕುವ ಕಾರ್ಯಕ್ರಮ ಸಾಮಾಜಿಕ ಅರಣ್ಯ ಇಲಾಖೆ ಮತ್ತು ವಲಯಾರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯಿತು.

ದಾರಿ ಮಧ್ಯೆ ಅಲ್ಲಲ್ಲಿ ಗಾಂಧೀಜಿಯ ಭಾವಚಿತ್ರಕ್ಕೆ ಸಂಘ ಸಂಸ್ಥೆಗಳ ಸದಸ್ಯರು, ಪುಟಾಣಿ ಮಕ್ಕಳು ಪುಷ್ಪಾರ್ಚನೆ ಮಾಡಿ ಗಾಂಧಿ ನಡಿಗೆಗೆ ಶುಭ ಕೋರಿದರು. ಜಟ್ಟಿಪಳ್ಳದಲ್ಲಿ ಸಿಟಿ ಫ್ರೆಂಡ್ಸ್ ವತಿಯಿಂದ ಸಿಹಿ ತಿಂಡಿ ಮತ್ತು ತಂಪು ಪಾನೀಯ ನೀಡಿ ಸಹಕರಿಸಲಾಯಿತು.