ಮೊಗರ್ಪಣೆ : ಹಾಫಿಲ್ ಪದವಿ ಪಡೆದ ಮೊಹಮ್ಮದ್ ರಾಫಿಗೆ ಎಚ್ ಐ ಜೆ ಕಮಿಟಿ ಮತ್ತು ವಿವಿಧ ಸಂಘಟನೆಗಳಿಂದ ಸನ್ಮಾನ

0

ಮೊಗರ್ಪಣೆ ನೂರೇ ಮದೀನಾ ಹಿಫ್ಲ್ ಮತ್ತು ದರ್ಸ್ ನ ವಿದ್ಯಾರ್ಥಿ ಮೊಹಮ್ಮದ್ ರಾಫಿ ತಮ್ಮ ಎರಡೂವರೆ ವರ್ಷದ ಶಿಕ್ಷಣದಲ್ಲಿ ಖುರಾನ್ ಕಂಠಪಾಠ ಮಾಡಿ ಹಾಫಿಲ್ ಪದವಿ ಪಡೆದಿದ್ದನ್ನು ಗೌರವಿಸಿ ಮೊಗರ್ಪಣೆ ಎಚ್ ಐ ಜೆ ಕಮಿಟಿ ಮತ್ತು ಜಮಾಅತಿನ ಇತರ ಸಂಘಟನೆಗಳ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಅಕ್ಟೋಬರ್ 1 ರಂದು ನಡೆಯಿತು.

ಮೊಗರ್ಪಣೆ ಮಸೀದಿ ವಠಾರದಲ್ಲಿ ಭಾನುವಾರದಂದು ನಡೆದ ಈದ್ ಮಿಲಾದ್ ಫೆಸ್ಟ್ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿಯನ್ನು ಗೌರವಿಸಿ ಸನ್ಮಾನಿಸಲಾಯಿತು.

ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ವಿದ್ಯಾರ್ಥಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿಎಂ ಉಸ್ಮಾನ್,ಕೋಶಾಧಿಕಾರಿ ಮಹಮ್ಮದ್ ಆದರ್ಶ,ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್,ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್, ಮಿಲಾದ್ ಸಮಿತಿಯ ಅಧ್ಯಕ್ಷ ಹನೀಫ್, ಓ ಎಸ್ ಎ ಮುಖಂಡ ರಶೀದ್ ಕೆ ವಿ ಜಿ,ಕೆ ಎಂ ಜೆ ಅಧ್ಯಕ್ಷ ಅಬ್ದುಲ್ಲಾ ಹಾಜಿ,ಎಸ್ ವೈ ಎಸ್ ಕಾರ್ಯದರ್ಶಿ ಶಮೀರ್,ಎಸ್ ಎಸ್ ಎಫ್ ಅಧ್ಯಕ್ಷ ಮೊಹಮ್ಮದ್ ಅತ್ತಾಸ್ ಸೇರಿದಂತೆ ಸಮಿತಿಯ ಇತರ ಮುಖಂಡರುಗಳು ಉಪಸ್ಥಿತರಿದ್ದರು.

ಬಳಿಕ ಸ್ಥಳೀಯ ಸಂಘ ಸಂಸ್ಥೆಗಳಾದ ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘ,ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈ ಎಸ್,ಎಸ್ ಎಸ್ ಎಫ್ ಜಂಟಿ ಸಂಘಟನೆಗಳು,ನೂರೇ ಮದೀನಾ ವಿದ್ಯಾರ್ಥಿ ಸಂಘ ಮೊಹಮ್ಮದ್ ರಾಫಿಯವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.

ಸ್ಥಳೀಯ ಕೆಲ ಮುಖಂಡರುಗಳು ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಗೌರವ ಧನ ನೀಡಿ ಸಹಕರಿಸಿದರು.

ಯಶಸ್ವಿ ಶಿಕ್ಷಣಕ್ಕೆ ಕಾರಣಕರ್ತರಾದ ಸ್ಥಳಿಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಹಾಫಿಲ್ ಪದವಿಯ ಮಹತ್ವ ಮತ್ತು ಈ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸಹಕರಿಸುವ ಜನತೆಗೆ ಅಲ್ಲಾಹನ ವತಿಯಿಂದ ದೊರಕುವ ಪುಣ್ಯ ಪ್ರತಿಫಲದ ಬಗ್ಗೆ ಮಾತನಾಡಿ ವಿದ್ಯಾರ್ಥಿಗೆ ಮತ್ತು ಸಹಕರಿಸಿದ ಸರ್ವರಿಗೆ ಅಭಿನಂದನೆಯನ್ನು ಸಲ್ಲಿಸಿದರು.