ಭಾಷೆಯ ಮೇಲಿನ ಹಿಡಿತ ಮತ್ತು ತಂತ್ರಜ್ಞಾನದ ಅರಿವು ಇದ್ದಾಗ ಭಾಷಾಂತರ ಒಂದು ಉದ್ಯೋಗವಾಗಬಲ್ಲದು: ಚಂದ್ರಾವತಿ ಬಡ್ಡಡ್ಕ

0

ಎನ್ನೆಂಸಿ, ಆಂಗ್ಲ ಭಾಷಾ ವಿಭಾಗ ಮತ್ತು ಐಕ್ಯೂಎಸಿ ಘಟಕ ವತಿಯಿಂದ ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆ

ಭಾಷೆಯ ಮೇಲಿನ ಹಿಡಿತ ಮತ್ತು ತಂತ್ರಜ್ಞಾನದ ಅರಿವಿದ್ದಾಗ ನಾವು ಭಾಷಾಂತರವನ್ನು ಒಂದು ಉತ್ತಮವಾದ ಹವ್ಯಾಸ ಹಾಗೂ ಉದ್ಯೋಗವಾಗಿ ಅಳವಡಿಸಿಕೊಳ್ಳಬಹುದು. ಹಾಗೆ ಯುವಜನತೆ ಈ ತಂತ್ರಜ್ಞಾನ ಯುಗದಲ್ಲಿ ತಮ್ಮನ್ನು ತಾವು ನಿರ್ದಿಷ್ಟ ದಾರಿಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದು ಭಾಷಾಂತರಕಾರರು, ಪತ್ರಕರ್ತರು ಹಾಗೂ ಲೇಖಕಿ ಚಂದ್ರಾವತಿ ಬಡ್ಡಡ್ಕ ಹೇಳಿದರು.
ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಅ. 3 ರಂದು ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮತ್ತು ಐಕ್ಯೂಎಸಿ ಘಟಕ ಹಮ್ಮಿಕೊಂಡ ಅಂತಾರಾಷ್ಟ್ರೀಯ ಭಾಷಾಂತರ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕಿ ಡಾ. ಮಮತ ಕೆ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು.


ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಭವ್ಯ ಪಿ ಎಂ ಸ್ವಾಗತಿಸಿ, ಉಪನ್ಯಾಸಕಿ ರಂಜಿತಾ ಬಿ ಆರ್ ವಂದಿಸಿದರು. ತೃತೀಯ ಬಿ. ಕಾಮ್ ವಿದ್ಯಾರ್ಥಿನಿ ಕು. ಕೃತಿಕಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಕು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಹಕರಿಸಿದರು.