ಸುಳ್ಯ ದಸರಾ ಶೋಭಾಯಾತ್ರೆಯ ಕುರಿತು ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

0

ಸರ್ಕಲ್ , ಎಸ್.ಐ., ಸಾರ್ವಜನಿಕ ಶ್ರೀ ಶಾರದಾಂಬ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್‌, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿಯ ವತಿಯಿಂದ ಅ.20ರಿಂದ ಅ.28ರವರೆಗೆ ಜರುಗಲಿದ್ದು, ಅ.28ರಂದು ಅಪರಾಹ್ನ ಸುಳ್ಯ ನಗರದಲ್ಲಿ ನಡೆಯಲಿರುವ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಕುರಿತು ಪೂರ್ವಭಾವಿ ಸಭೆಯು ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಟ್ಟಾರಿ, ಎಸ್.ಐ. ಈರಯ್ಯ ದೂಂತೂರು ಹಾಗೂ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅ.9ರಂದು ನಡೆಯಿತು.

ಸುಳ್ಯ ನಗರದ ಸರ್ಕಾರಿ ಆಸ್ಪತ್ರೆಯ ಬಳಿ ಶೋಭಾಯಾತ್ರೆಯು ಸಾಗುವ ವೇಳೆ ಡಿ.ಜೆ. ಯನ್ನು ಬಂದ್ ಮಾಡಿ ಶಾಂತಿಯುತ ರೀತಿಯಲ್ಲಿ ಸಹಕರಿಸುವಂತೆ ಎಸ್.ಐ. ಈರಯ್ಯ ದೂಂತೂರು ಅವರು ಸಮಿತಿಗೆ ವಿನಂತಿಸಿಕೊಂಡರು.


ನಗರದಲ್ಲಿ ಶೋಭಾಯಾತ್ರೆಯ ಸಾಗುವ ವೇಳೆ ಯುವಕರನ್ನು ರಸ್ತೆಯ ಅಲ್ಲಲ್ಲಿ ನಿಲ್ಲಿಸಿ, ವ್ಯವಸ್ಥೆ ಮಾಡುವುದಾಗಿ ದಸರಾ ಉತ್ಸವ ಸಮಿತಿಯವರು ಪೊಲೀಸ್ ಇಲಾಖೆಯವರಲ್ಲಿ ಕೇಳಿಕೊಂಡಾಗ, ಸುಳ್ಯ ನಗರದಾದ್ಯಂತ ನಾವು ಪೊಲೀಸ್ ಇಲಾಖೆಯ ವತಿಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡುವುದಾಗಿ ಎಸ್.ಐ. ಹೇಳಿದರೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ , ಶಾಸಕಿ ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ಸುನಿಲ್ ಕೇರ್ಪಳ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಉಪಾಧ್ಯಕ್ಷರುಗಳಾದ ಕೃಷ್ಣಬೆಟ್ಟ, ಜನಾರ್ದನ ಗೌಡ, ಕೋಶಾಧಿಕಾರಿ ಕೆ., ಕಾರ್ಯದರ್ಶಿಗಳಾದ ಕುಸುಮಾಧರ ರೈ ಬೂಡು, ರಾಜೇಶ್ ಕುರುಂಜಿಗುಡ್ಡೆ, ಕೆ. ರಾಜು ಪಂಡಿತ್, ಪ್ರದೀಪ್ ಕೆ.ಎನ್. ಸೇರಿದಂತೆ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.