ಅರಂಬೂರು : ನೆಡ್ಚಿಲ್ ನಲ್ಲಿ ಮನೆ ಮತ್ತು ಕೊಟ್ಟಿಗೆಗೆ ಸಿಡಿಲು ಬಡಿದು ಹಾನಿ

0

ಅಲೆಟ್ಟಿ ಗ್ರಾಮದ ಅರಂಬೂರು ಬಳಿಯ ನೆಡ್ಚಿಲ್ ಉಕ್ರಪ್ಪ ಗೌಡ ಎಂಬುವವರ ಮನೆ ಮತ್ತು ಕೊಟ್ಟಿಗೆಗೆ ಇವತ್ತು ಸಂಜೆ ಸಿಡಿಲು ಬಿದ್ದು ಹಾನಿಯಾಗಿರುವುದಾಗಿ ತಿಳಿದು ಬಂದಿದೆ . ಅನಾರೋಗ್ಯ ಪೀಡಿತ ಯುವಕ ಮಲಗಿದ್ದಲ್ಲೆ ಇದ್ದು ಅವರ ಬಳಿಯಲ್ಲಿ ಗೋಡೆಗೆ ಅಳವಡಿಸಿದ ಸ್ವಿಚ್ ಬೋರ್ಡ್ ಗಳು ಸಿಡಿಲಿನ ಹೊಡೆತಕ್ಕೆ ಪಕ್ಕಕ್ಕೆ ಬಿದ್ದವು ಅಲ್ಲದೆ ಶೌಚಾಲಯದ ಗೋಡೆಗಳು ಪುಡಿಯಾಗಿದೆ ಮತ್ತು ಮನೆಯ ಮೇಲೆ ಸಿಡಿಲು ಹೊಡೆದ ಪರಿಣಾಮ ಅಪಾರ ಹಾನಿ ಸಂಭವಿಸಿದೆ ಅಲ್ಲದೇ ಇವರ ಮನೆಯ ಪಕ್ಕದ ಮನೆಗೂ ಸಿಡಿಲು ಹೊಡೆದಿದೆ.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರತೀಶನ ಅರಂಬೂರು ಭೇಟಿ ನೀಡಿದ್ದು ಕಂದಾಯ ಇಲಾಖೆಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.