ಬೆಳ್ಳಾರೆ: ಮಾಂಡೋವಿ ಮೋಟಾರ್ಸ್ ನ ಮಾಹಿತಿ ಕೇಂದ್ರ ಉದ್ಘಾಟನೆ

0

ಸುಳ್ಯದ ಓಡಬಾಯಿಯಲ್ಲಿ ಕಾರ್ಯಾಚರಿಸುತ್ತಿರುವ ಮಾಂಡೋವಿ ಮೋಟಾರ್ಸ್ ನ ಮಾಹಿತಿ ಕೇಂದ್ರ ಅ. 20ರಂದು ಬೆಳ್ಳಾರೆಯ ಕೆಳಗಿನ ಪೇಟೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಪ್ರಗತಿಪರ ಕೃಷಿಕರಾದ ವಾರಣಾಶಿ ಸುಬ್ಬಪ್ಪಯ್ಯ ಕೇಂದ್ರವನ್ನು ಉದ್ಘಾಟಿಸಿ , ಶುಭ ಹಾರೈಸಿದರು.


ಮಾಂಡೋವಿ ಮೋಟಾರ್ಸ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶಶಿಧರ ಕಾಮತ್, ಸೇಲ್ಸ್ ಮ್ಯಾನೇಜರ್ ಕಿಶಣ್ ಶೆಟ್ಟಿ, ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಸುಜಿತ್ ಕುಮಾರ್, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಪ್ರದೀಪ್ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಸುಳ್ಯ ವರ್ಕ್ಸ್ ಮ್ಯಾನೇಜರ್ ಸುದೇಶ್ ಜೈನ್ ಸ್ವಾಗತಿಸಿದರು. ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಸುರೇಶ್ ಬಿ.ಜಿ ಕಾರ್ಯಕ್ರಮ ನಿರೂಪಿಸಿದರು.

ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಸೀನಿಯರ್ ಮ್ಯಾನೇಜರ್ ಹರ್ಷ ರೈ, ಬಿ.ಸಿ. ರೋಡ್ ಮಾಂಡೋವಿ ಮೋಟಾರ್ಸ್ ನ ಸೀನಿಯರ್ ಮ್ಯಾನೇಜರ್ ಚೇತನ್ ಕುಮಾರ್, ವಿಟ್ಲ ಮಾಂಡೋವಿ ಮೋಟಾರ್ಸ್ ನ ಸೀನಿಯರ್ ಮ್ಯಾನೇಜರ್ ಸುನಿಲ್ ಕುಮಾರ್ ಮತ್ತು ಮಾಂಡೋವಿ ಮೋಟಾರ್ಸ್ ನ‌ ಸಿಬ್ಬಂದಿವರ್ಗ, ಗ್ರಾಹಕರು ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.