ಚೊಕ್ಕಾಡಿ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಚಿನ್ನಪ್ಪ ಗೌಡ ಪೈಲೂರು ನಿಧನ

0

ಅಮರಮುಡ್ನೂರು ಗ್ರಾಮದ ಪೈಲೂರು ನಿವಾಸಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಚಿನ್ನಪ ಗೌಡ ರವರು ಇಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಮೀನಾಕ್ಷಿ, ಪುತ್ರ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಲೋಕೇಶ್ ಪೈಲೂರು, ಮುತ್ತೂಟ್ಟು ಪೈನಾನ್ಸ್ ಮ್ಯಾನೇಜರ್ ಯತಿರಾಜ್ ಪೈಲೂರು, ಸಹೋದರ ಅಮರಮುಡ್ನೂರು ಪಂಚಾಯತ್ ಮಾಜಿ ಸದಸ್ಯ ಅಣ್ಣಾಜಿ ಗೌಡ ಪೈಲೂರು, ಸಹೋದರಿಯರಾದ ಶ್ರೀಮತಿ ಶೀಲಾವತಿ, ಶ್ರೀಮತಿ ಸರೋಜಿನಿ, ಶ್ರೀಮತಿ ಸುಮತಿ, ಶ್ರೀಮತಿ ಹೇಮಲತಾ, ಸೊಸೆಯಂದಿರಾದ ಶ್ರೀಮತಿ ದೀಪ್ತಿ ಲೋಕೇಶ್, ಶ್ರೀಮತಿ ಶರ್ಮಿಳಾ ಯತಿರಾಜ್ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು,
ಬಂಧು -ಮಿತ್ರರನ್ನು ಆಗಲಿದ್ದಾರೆ.

ಇವರು ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ ದಲ್ಲಿ ಕಾರ್ಯದರ್ಶಿಯಾಗಿ ಸುದೀರ್ಘ ಸೇವೆ ಸಲ್ಲಿಸಿ 2005 ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ್ದರು.