ಸುಳ್ಯ ದಸರಾ ಶಾರದಾಂಬಾ ಕಲಾ ವೇದಿಕೆಯಲ್ಲಿ ಪ್ರಗತಿ ಸೌಂಡ್ಸ್ ಮಾಲಕ ಶಾಫಿ ಪೈಚಾರು ರವರಿಗೆ ಸನ್ಮಾನ

0

ಸುಳ್ಯ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಸೇವಾ ಟ್ರಸ್ಟ್, ದಸರಾ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ದಸರಾ 2023 ರ ಶಾರದಾಂಬಾ ಕಲಾ ವೇದಿಕೆಯಲ್ಲಿ ಪ್ರಗತಿ ಸೌಂಡ್ಸ್ ಮಾಲಕ ಶಾಫಿ ಪೈಚಾರು ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ ಸುಳ್ಯ, ಉಪಾಧ್ಯಕ್ಷ ನಾರಾಯಣ ಕೇಕಡ್ಕ, ಬೂಡು ರಾಧಾಕೃಷ್ಣ ರೈ, ಎಸ್.ಸಿಕ್ಸ್ ಅಧ್ಯಕ್ಷ ಚಿದಾನಂದ ವಿದ್ಯಾನಗರ, ನವೀನ್ ಚಂದ್ರ ಬೆಂಗಳೂರು, ರವಿಚಂದ್ರ ಕೊಡಿಯಾಲಬೈಲು, ಚಂದ್ರಶೇಖರ ಪಂಡಿತ್, ಪುರುಷೋತ್ತಮ ಉಪಸ್ಥಿತರಿದ್ದರು.