ಸುಳ್ಯ ಸೆಂಟರ್ ನಲ್ಲಿ ಲೆಟ್ಯೂಸ್ ಕೆಫೆ ಶುಭಾರಂಭ

0

ಸುಳ್ಯದ ಬಸ್ ನಿಲ್ದಾಣದ ಬಳಿ ಇರುವ ಸುಳ್ಯ ಸೆಂಟರ್ ನಲ್ಲಿ ಲೆಟ್ಯೂಸ್ ಕೆಫೆ ನ. 1ರಂದು ಶುಭಾರಂಭಗೊಂಡಿತು.


ಇದರ ಉದ್ಘಾಟನೆಯನ್ನು ಸುಳ್ಯ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ ಉದ್ಘಾಟಿಸಿದರು.
ಸುಳ್ಯ ಅಜ್ಜಾವರ ಅಯ್ಯಪ್ಪ ಸೇವಾಶ್ರಮದ ಧರ್ಮದರ್ಶಿ ಶಿವಪ್ರಕಾಶ್ ಅಡ್ಪಂಗಾಯ ದ್ವೀಪ ಬೆಳಗಿಸಿದರು.


ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ಉದ್ಯಮಿ ಮುರುಗನ್,ಉದ್ಯಮಿ ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಯೂಟ್ಯೂಬರ್ ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಪಾಲುದಾರರಾದ ಜತ್ತಿನ್,ನವೀನ್,ಕೃತನ್,ಗೌತಮ್ ಸರ್ವರನ್ನೂ ಸ್ವಾಗತಿಸಿ ಬರ್ಗರ್ ,ಪಿಜ್ಜಾ ,ಸ್ಯಾಂಡ್ವಿಜ್,ಜ್ಯೂಸ್ ,ಐಸ್ ಕ್ರೀಮ್, ಬರ್ತ್ ಡೇ ಕೇಕ್, ಚಾರ್ಟ್ ಸಹಿತ ಹಲವಾರು ಐಟಂಗಳು ದೊರೆಯಲಿದೆ. ಐಡಿ ಹೊಂದಿರುವ ಕಾಲೇಜ್ ವಿದ್ಯಾರ್ಥಿಗಳಿಗೆ ಶೇ .15 ರಿಯಾಯಿತಿ ಇದೆ ಎಂದು ಮಾಲಕರು ತಿಳಿಸಿದರು.