ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ನೂತನ ಪಿ.ಡಿ.ಒ ಆಗಿ ನಯನ ಕುಮಾರಿ

0

ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿದ್ದ ನಯನ ಕುಮಾರಿ ಯವರಿಗೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ.


ಬೆಳ್ಳಾರೆ ಗ್ರಾ.ಪಂ.ನಲ್ಲಿ ಪ್ರಭಾರ ಪಿ.ಡಿ.ಒ . ಆಗಿದ್ದ ಶ್ಯಾಮ್ ಪ್ರಸಾದ್ ರವರು ಕಳೆದ ಎರಡು ತಿಂಗಳ ಹಿಂದೆ ಹರಿಹರ ಗ್ರಾಮ ಪಂಚಾಯತ್ ಗೆ ಪ್ರಭಾರ ಪಿಡಿಒ ಆಗಿ ವರ್ಗಾವಣೆಯಾಗಿದ್ದರು. ಅವರ ಸ್ಥಾನವನ್ನು ಪ್ರಭಾರ ಪಿ.ಡಿ.ಒ. ಆಗಿ ಪ್ರವೀಣ್ ರವರು ಅಧಿಕಾರ ವಹಿಸಿಕೊಂಡಿದ್ದರು.

ಇದೀಗ ಬೆಳ್ಳಾರೆ ಗ್ರಾ.ಪಂ.ಗೆ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬಂಟ್ವಾಳ ತಾಲೂಕಿನ ಅಮ್ಮಂಜೆ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿದ್ದ ನಯನ ಕುಮಾರಿ ಯವರಿಗೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ.