ಶ್ರೀಮತಿ ಸುನಂದ ಜಿ. ದಂಬೆಕೋಡಿಯವರಿಗೆ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ

0

ಕರ್ನಾಟಕ ರಾಜ್ಯ ಸರಕಾರಿ ನೌಕರರ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕರಕುಶಲ ‘(ಹ್ಯಾಂಡ್ ಕ್ರಾಫ್ಟ್ )ದಲ್ಲಿ ಆರೋಗ್ಯ ಇಲಾಖೆಯ ವೆನ್ಲೋಕ್ ಆಸ್ಪತ್ರೆ ಮಂಗಳೂರು ನರ್ಸಿಂಗ್ ಆಫೀಸರ್ ಶ್ರೀಮತಿ ಸುನಂದ. ಜಿ. ದಂಬೆಕೋಡಿ ಯವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಅ.27 ಮತ್ತು ಅ‌.28 ರಂದು ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಇವರು ಗುತ್ತಿಗಾರು ದಂಬೆಕೋಡಿಯವರಾಗಿರುವ ಮಾಜಿ ಸೈನಿಕ, ಕೃಷಿಕ ಗಂಗಾಧರ ಗೌಡ ದಂಬೆಕೋಡಿ ಅವರ ಪತ್ನಿ.