ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಹೊರಾಂಗಣದ ರಾಜಗೋಪುರ ನಿರ್ಮಾಣದ ಕುರಿತು ಗ್ರಾಮದ ಭಕ್ತಾದಿಗಳ ಸಭೆ

0

ಕೊಡಗಿನ ಪೆರಾಜೆಯ ಶ್ರೀ ಶಾಸ್ತಾವು  ದೇವಸ್ಥಾನದ ಹೊಸ ಹೊರಾಂಗಣದ ರಾಜ ಗೋಪುರ ( ಪಡ್ಪಿರೆ ) ನಿರ್ಮಾಣದ  ಕುರಿತು ಗ್ರಾಮದ ಭಕ್ತಾದಿಗಳ ಸಭೆಯು ದೇವಸ್ಥಾನದ ಸಭಾಭವನದಲ್ಲಿ ನ.5ರಂದು ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರು ಮಾತನಾಡಿ ಗ್ರಾಮದ ಭಕ್ತರ  ಸಹಕಾರದಿಂದ ದೇವಸ್ಥಾನವು 2017ರಲ್ಲಿ ವಿಜೃಂಭಣೆಯಿಂದ  ನವೀಕರಣ ಪುನರ್ ಪ್ರತಿಷ್ಠೆ,    ಬ್ರಹ್ಮಕಲಶೋತ್ಸವ ನಡೆದಿದ್ದು, ಬಳಿಕ   ಸುಮಾರು 40 ಲಕ್ಷ  ಅಂದಾಜು  ವೆಚ್ಚದ  ನೂತನ  ಗೋಪುರ ನಿರ್ಮಾಣ ಮಾಡಲು  ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಬಗ್ಗೆ ಈಗಾಗಲೇ ಶಿಲ್ಪಿಗಳಾದ ರಮೇಶ್ ಕಾರಂತ್ ಅವರು ನೀಲನಕ್ಷೆ ತಯಾರು ಮಾಡಿದ್ದಾರೆ.

ದೇವಾಲಯದ ಮುಂದಿನ  ಜಾತ್ರೆಯ ನಂತರ ಒಂದು ವರ್ಷದ ಅವಧಿಯೊಳಗೆ ನಿರ್ಮಾಣದ  ಕಾರ್ಯವನ್ನು   ಮುಕ್ತಾಯ  ಮಾಡುವಂತೆ   ಪೂರ್ವ ತಯಾರಿ ಮಾಡಿಕೊಳ್ಳಲಾಗಿದ್ದು, ಗ್ರಾಮಸ್ಥರ  ಸಹಕಾರದಿಂದ ಈ ಗೋಪುರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.   ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕ , ತಕ್ಕ ಮುಖ್ಯಸ್ಥರು, ಮಾಜಿ ಆಡಳಿತ ಮೊಕ್ತೇಸರರು , ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು  ಹಾಜರಿದ್ದರು.