ಸೈಂಟ್ ಬ್ರಿಜಿಡ್ಸ್ ಚರ್ಚ್ ಗೆ ಕೀಬೋರ್ಡ್ ಕೊಡುಗೆ

0

ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ ಗೆ ಬಲಿ ಪೂಜೆಯ ಸಂದರ್ಭದಲ್ಲಿ ಸಂಗೀತ ನುಡಿಸಲು ನೋಯಲ್ ಪ್ರಕಾಶ್ ಪೈಚಾರ್ ಅವರು ಹೊಸ ಕೀಬೋರ್ಡ್ ನ್ನು ದಾನವಾಗಿ ನೀಡಿದರು.

ಸುಮಾರು ರೂ.95,000 ದಷ್ಟು ವೆಚ್ಚದ ಕೀಬೋರ್ಡ್ ಇದಾಗಿದ್ದು ಚರ್ಚಿನ ಎಲ್ಲಾ ಕಾರ್ಯಕ್ರಮಗಳ ಮೆರುಗನ್ನು ಹೆಚ್ಚಿಸಲಿದೆ.

ಈ ಸಂದರ್ಭದಲ್ಲಿ ದಾನ ನೀಡಿದ ದಾನಿಯನ್ನು ಚರ್ಚಿನ ಧರ್ಮ ಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ ಅವರು ಬಲಿಪೂಜೆಯ ಬಳಿಕ ಚರ್ಚ್ ಬಾಂಧವರ ಸಮ್ಮುಖದಲ್ಲಿ ಹೂವು ನೀಡುವುದರ ಮೂಲಕ ಅಭಿನಂದಿಸಿದರು.