ಸುಳ್ಯದ ಟೀಮ್ ಜಟಾಯು ತಂಡದಿಂದ ಮೇನಾಲ ಶಾಲೆಗೆ ಎಜ್ಯುಕೇಶನ್ ಕಿಟ್ ವಿತರಣೆ

0

ಸುಳ್ಯದ ಟೀಮ್ ಜಟಾಯು ಇದರ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇನಾಲ ಶಾಲೆಯ ಮಕ್ಕಳಿಗೆ ಎಜುಕೇಶನ್ ಕಿಟ್ ನ.4ರಂದು ವಿತರಣೆ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಟೀಮ್ ಜಟಾಯು ತಂಡದ ಆಶಿತ್ , ಜೀವಿತ್, ಪೃಥ್ವಿ ಕುಮಾರ್,ಲಿಖಿತ್, ನಿತೀಶ್,ಧೀರಜ್, ಪ್ರಮುಖ್, ಭವಿತ್ ಮತ್ತು ಶಾಲೆಯ ಮುಖ್ಯ ಶಿಕ್ಷರಾದ ಕನಕ ಇತರೆ ಶಾಲಾ ಸಿಬ್ಬಂದಿಗಳು, ಮಕ್ಕಳು, ಭಾಗವಹಿಸಿದ್ದರು. ಪೃಥ್ವಿ ಕುಮಾರ್ ಇವರು ಸ್ವಾಗತ ಮತ್ತು ಪ್ರಾಸ್ತವಿಕ ನುಡಿಗಳನ್ನು ನುಡಿದರು. ಶಾಲಾ ಮುಖ್ಯ ಶಿಕ್ಷಕರು ಎಲ್ಲರಿಗೂ ವಂದನೆಗಳನ್ನು ಸೂಚಿಸಿ ಟೀಮ್ ಜಟಾಯು ತಂಡ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.