ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ಪಿಕ್ ಮೆಕೆ ಆಯೋಜಿತ ಗೋಡ್ಕಿಂಡಿ ಸಹೋದರರಿಂದ ಸಂಗೀತ ಕಾರ್ಯಕ್ರಮ

0

ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ನ. 7ರಂದು ಸಂಜೆ ಸ್ಪಿಕ್ ಮೆಕೆ ಆಯೋಜಿಸಿದ ಕೊಳಲು ಗಾಯನ ಕಾರ್ಯಕ್ರಮ ನಡೆಯಿತು. ಕೊಳಲುವಾದನದಲ್ಲಿ ಪ್ರವೀಣ್ ಗೋಡ್ಕಿಂಡಿ (ಹಿಂದುಸ್ಥಾನಿ ಕೊಳಲು ವಾದಕರು) ತಬಲದಲ್ಲಿ ಕಿರಣ್ ಗೋಡ್ಕಿಂಡಿ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳ ಪೋಷಕರು, ಸಂಗೀತ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್, ಶ್ರೀಮತಿ ರಜನಿ ಉಮೇಶ್, ಶ್ರೀಮತಿ ಆಕಾಂಕ್ಷ ನಿಖಿಲ್ ಬಾಳಿಗ, ಶ್ರೀಮತಿ ಸುಜಾತ‌ ಮುರಳೀಧರ್ ಬಾಳಿಗ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದೇಚಮ್ಮ ಗೋಡ್ಕಿಂಡಿ ಸಹೋದರರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.