ಸುಬ್ರಹ್ಮಣ್ಯ:ಆಂಜನೇಯ ಗುಡಿಯಲ್ಲಿ ಕಳ್ಳತನ

0

ಸುಬ್ರಹ್ಮಣ್ಯದ ಆಂಜನೇಯ ಗುಡಿಯಲ್ಲಿ ನ.9 ರಾತ್ರಿ ಕಳ್ಳತನ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕಾರ್ಯನಿರ್ವಾಹಣಾಧಿಕಾರಿ ಸುಬ್ರಹ್ಮಣ್ಯ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ದೇವಸ್ಥಾನದ ವತಿಯಿಂದ ಆಂಜನೇಯ ಗುಡಿ ಬಳಿ ಅಳವಡಿಸಿರುವ ಸಿ.ಸಿ ಕ್ಯಾಮಾರಗಳನ್ನು ಪರಿಶೀಲಿಸಲಾಗಿದ್ದು ಕಳ್ಳನೊಬ್ಬ ರಾತ್ರಿ ವೇಳೆ ಗೇಟು ದಾಟಿ ಕಳ್ಳತನ ಮಾಡಿರುವ ದೃಶ್ಯ ಸೆರೆಯಾಗಿರುವುದಾಗಿ ತಿಳಿದು ಬಂದಿದ್ದು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿದು ಬಂದಿದೆ.