ನೀವಿಯಸ್ ಮಂಗಳೂರು ಮ್ಯಾರಥಾನ್ ನಲ್ಲಿ ಶ್ರೀಮತಿ ವಿದ್ಯಾ ಬಂಗಾರಕೋಡಿ ಅವರಿಗೆ ಹತ್ತು ಕಿ.ಮೀ. ಓಟದಲ್ಲಿ ಪ್ರಥಮ ಸ್ಥಾನ

0

ನೀವಿಯಸ್ ಮಂಗಳೂರು ಮ್ಯಾರಥಾನ್ ಸ್ಪರ್ಧೆಯ ಹತ್ತು ಕಿ.ಮೀ. ಓಟದ ಸ್ಪರ್ಧೆಯಲ್ಲಿ ಪೆರಾಜೆ ಗ್ರಾಮದ ಬಂಗಾರಕೋಡಿಯ ಶ್ರೀಮತಿ ವಿದ್ಯಾ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ನೀವಿಯಸ್ ಮಂಗಳೂರು ಮ್ಯಾರಥಾನ್ ನ ಹತ್ತು ಕಿ.ಮೀ. ಓಟವನ್ನು ಕೇವಲ 56 ನಿಮಿಷದಲ್ಲಿ ಓಡಿದ ಶ್ರೀಮತಿ ವಿದ್ಯಾ ಅವರು ಪ್ರಥಮ ಸ್ಥಾನ ಗಳಿಸಿದ್ದು, ಬೆಳಗಾವಿಯ ಖಾನಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈಕೆ ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೆ. ಕೂಸಪ್ಪ ಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಯ ಪುತ್ರಿಯಾಗಿದ್ದು, ಪೆರಾಜೆ ಗ್ರಾಮದ ಬಂಗಾರಕೋಡಿ ಹರೀಶ್ ಅವರ ಪತ್ನಿ. ಶ್ರೀಮತಿ ವಿದ್ಯಾ ಅವರು ಧರ್ಮಸ್ಥಳ ಆಧಿಶಕ್ತಿ ಸಂಘ ಹಾಗೂ ಸ್ವರ್ಣಶ್ರೀ ಸಂಘದ ಸದಸ್ಯೆಯಾಗಿದ್ದಾರೆ.