ಪಂಜಿಕಲ್ಲಿನ ಬಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಎರಡು ಕಾಡಾನೆಗಳು

0

ಜಾಲ್ಸೂರು ಸಮೀಪದ ಪಂಜಿಕಲ್ಲಿನ ಬಳಿ ಮುಖ್ಯರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಚರಿಸಿದ್ದ ಕಾಡಾನೆ ಬಳಿಕ ರಸ್ತೆ ಬದಿಯ ಸಮೀಪದ ಕಾಡಿಗೆ ತೆರಳಿದ್ದು, ಇದೀಗ ರಸ್ತೆ ಬದಿಯ ಕಾಡಿನಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದಾಗಿ ತಿಳಿದುಬಂದಿದೆ.

ಜಾಲ್ಸೂರು – ಕಾಸರಗೋಡು ಅಂತರರಾಜ್ಯ ರಸ್ತೆಯ ಪಂಜಿಕಲ್ಲಿನ ಬಳಿ ಬೆಳಿಗ್ಗೆ ಒಂದು ಕಾಡಾನೆ ರಸ್ತೆಯಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ದು, ಇದೀಗ ರಸ್ತೆ ಬದಿಯ ಕಾಡಿನಲ್ಲಿ ಬೀಡುಬಿಟ್ಟಿರುವುದಾಗಿ ತಿಳಿದುಬಂದಿದೆ. ಒಟ್ಟು ಮೂರು ಕಾಡಾನೆಗಳಿದ್ದು, ಇನ್ನೊಂದು ಆನೆ ಬೆಳ್ಳಿಪ್ಪಾಡಿ ಕಡೆ ಕಾಡಿನಲ್ಲಿರುವುದಾಗಿ ತಿಳಿದುಬಂದಿದೆ.