ವಿನೋಬನಗರ : ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ರಕ್ಷಕ – ಶಿಕ್ಷಕ ಸಂಘ ರಚನೆ

0


ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ರಕ್ಷಕ – ಶಿಕ್ಷಕ ಸಂಘವನ್ನು ಇತ್ತೀಚೆಗೆ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಅಶೋಕ ಅಡ್ಕಾರು,ಉಪಾಧ್ಯಕ್ಷರಾಗಿ ತೀರ್ಥರಾಮ ಎಂ. ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಸುಧಾಕರ ಕಾಮತ್ ,ಗೌರವ ಸಲಹೆಗಾರರಾದ ನ. ಸೀತಾರಾಮ , ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್ ಎ. , ರಕ್ಷಕ – ಶಿಕ್ಷಕ ಸಂಘದ ಸದಸ್ಯರುಗಳಾದ ಶ್ರೀಮತಿ ಜಲಜ ಆಚಾರ್ಯ, ಶ್ರೀಮತಿ ಉಷಾ ಕುಮಾರಿ,ಭವಾನಿ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.