ಗೋವು ನಮ್ಮ ಬದುಕಿನ ಆಧಾರಸ್ತಂಭ -ಕೃಷಿಕರ ಬಾಳಿನ ಸುರಭಿ – ಧೇನು, ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾಗಿದೆ – ಮೋಕ್ಷ ಸಮಾಜ ನಿರ್ಮಾಣವಾಗಲಿದೆ- ರಾಜಶೇಖರಾನಂದ ಸ್ವಾಮೀಜಿ

0

ಭಗವಂತನಿಗೆ ದೀಪ ಹಚ್ಚಿ ಭಜನೆಯ ಮೂಲಕ ದೇವರು ಸಂಸ್ಕೃತಿ ಸಂಸ್ಕಾರ ಆಚರಣೆಗಳ ಮೂಲಕ ಪೂಜಿಸಲ್ಪಡುವ ನಮ್ಮ ಬದುಕಿನ ಆಧಾರಸ್ತಂಭವಾಗಿರುವ ಸುರಭಿ ಧೇನು ಗೋಮಾತೆಯಾಗಿದೆ. ಕೃಷಿಯಿಂದ ದೇಶ ಸಂಪದ್ಭರಿತವಾಗಲು ಸಾಧ್ಯವಿದೆ.ದೇಶ ರಕ್ಷಣೆ, ಧರ್ಮ ರಕ್ಷಣೆ ಸಂಸ್ಕೃತಿ ಉಳಿಯಬೇಕಾದರೆ ಸಂಘಟನೆ ಪ್ರೇರಣೆಯಾಗಲಿದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಆಶೀರ್ವದಿಸಿದರು.

ಸುಳ್ಯ ನಗರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಗೋರಕ್ಷಾ ವಿಭಾಗದ ವತಿಯಿಂದ
ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಸಮಾಜದ ಸಂಘಟನೆಯ ಮೂಲಕ ಗೋರಕ್ಷಣೆ ಧರ್ಮರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಕೇಸನ್ನು ಮೈಮೇಲೆ ಹಾಕಿಕೊಂಡ ಕಾರ್ಯಕರ್ತರನ್ನು ಜಿಲ್ಲಾ ಆಡಳಿತ ಗಡಿಪಾರು ಮಾಡಲು ಮುಂದಾಗಿರುವುದು ವಿಪರ್ಯಾಸ.
ಬಡ ಕಾರ್ಯಕರ್ತರನ್ನು ಗಡಿಪಾರು ಮಾಡುವ ಬದಲಾಗಿ ನಮ್ಮನ್ನು ಗಡಿಪಾರು ಮಾಡಿ ನಿಮ್ಮ ತಾಕತ್ತು ತೋರಿಸಿ. ಅಯೋಧ್ಯೆಯಲ್ಲಿ ಹಿಂದೂ ಸಮಾಜದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಇದರಿಂದ ಹಿಂದೂ ಸಮಾಜ ಮೋಕ್ಷ ಸಮಾಜವಾಗಿ ಪರಿವರ್ತನೆಗೊಳ್ಳಲಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಸುಳ್ಯ ನಗರ ವಿ.ಹೆಚ್.ಪಿ ಅಧ್ಯಕ್ಷ ಉಪೇಂದ್ರ ನಾಯಕ್, ಅತಿಥಿಗಳಾಗಿ ಶ್ರೀಮತಿ ಲತಾಮಧುಸೂದನ್, ಉದ್ಯಮಿಕುಂ.ಕುಂ.ಫ್ಯಾಶನ್ ‌ಮಾಲಕ ಭೀಮ್ ಪಟೇಲ್ , ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ವಿ.ಹೆಚ್.ಪಿ ಪ್ರ.ಕಾರ್ಯದರ್ಶಿ ನವೀನ್ ಎಲಿಮಲೆ, ಗೋರಕ್ಷಾ ಪ್ರಮುಖ್ ಅರವಿಂದ, ಸುಳ್ಯ ‌ನಗರ ಬಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು.
ಕು.ಅಭಿಜ್ಞಾ ಪ್ರಾರ್ಥಿಸಿದರು. ನವೀನ್ ಎಲಿಮಲೆ ಸ್ವಾಗತಿಸಿದರು. ವರ್ಷಿತ್ ಚೊಕ್ಕಾಡಿ ವಂದಿಸಿದರು. ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.