ಪಟಾಕಿ ಸಿಡಿದು ಬಾಲಕನ ಮುಖಕ್ಕೆ ಗಾಯ

0

ದೀಪಾವಳಿ ಸಂದರ್ಭ ಪಟಾಕಿ ಸಿಡಿದು ಯುವಕನೊಬ್ಬನ ಮುಖಕ್ಕೆ ಗಾಯವಾದ ಘಟನೆ ಗುತ್ತಿಗಾರಿನಿಂದ ತಡವಾಗಿ ವರದಿಯಾಗಿದೆ.

ಗುತ್ತಿಗಾರಿನ ಮನೋಜ್ ಅವರ ಮಗ ರಂಜಿತ್ ಎಂಬವರು ಗಾಯಕ್ಕೊಳಗಾದ ಯುವಕ.
ನ.೧೪ ರಂದು ದೀಪಾವಳಿ ಸಂದರ್ಭ ಫ್ಲವರ್ ಪಾಟ್ ಪಟಾಕಿಯೊಂದಕ್ಕೆ ಬೆಂಕಿ ಕೊಟ್ಟಾಗ ಅದು ಒಮ್ಮೆಲೆ ಸಿಡಿದು ಮುಖದ ಅರ್ಧ ಭಾಗ ಕರಟಿದಂತಾಗಿದೆ. ಎರಡೂ ಕಣ್ಣಿನ ಭಾಗಕ್ಕೆ ತೀವ್ರ ಗಾಯವಾಗಿದ್ದು ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಮನೆಗೆ ತೆರಳಿರುವುದಾಗಿ ತಿಳಿದು ಬಂದಿದೆ.