ನ.23 : ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ‌ಕರೆಂಟಿಲ್ಲ

0

ನ.23 ಗುರುವಾರದಂದು ಪೂರ್ವಾಹ್ನ 10 ರಿಂದ ಸಂಜೆ 5 ರವರೆಗೆ ಸುಬ್ರಹ್ಮಣ್ಯ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ಸುಬ್ರಹ್ಮಣ್ಯ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್ ಗಳಾದ ಹರಿಹರ, ನಡುಗಲ್ಲು, ಕುಮಾರಧಾರ, ಆದಿಶೇಷ, ಕೈಕಂಬ ಮತ್ತು ಯೇನೆಕಲ್ಲು ಫೀಡರ್ ಗಳಲ್ಲಿ ವಿದ್ಯುತ್ ಸರಬರಾಜು ಆಗುವ ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.