ಬೆಳ್ಳಾರೆ: ಲಯನ್ಸ್ ಕ್ಲಬ್ ಚಾರ್ಟರ್ ನೈಟ್‌, ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಚಾರ್ಟರ್ ನೈಟ್ ಮತ್ತು ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ನ. 20ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ನಡೆಯಿತು.

ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಬೆಳ್ಳಾರೆ ಸ.ಹಿ.ಪ್ರಾ. ಶಾಲೆಗೆ ಆಗಮಿಸಿದ ಜಿಲ್ಲಾ ಗವರ್ನರ್ ಲ| ಡಾ. ಮೆಲ್ವಿನ್ ಡಿ’ಸೋಜ ಮತ್ತು ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲ| ಓಸ್ವಾಲ್ಡ್ ಡಿ’ಸೋಜ ರನ್ನು ಕ್ಲಬ್‌ನ ಅಧ್ಯಕ್ಷ ಲ| ಪಿ. ವಿಠಲ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿದರು. ಕ್ಲಬ್‌ನ ರೀಜಿನಲ್ ಚಯರ್ ಪರ್ಸನ್ ಲ| ರೇಣುಕಾ ಸದಾನಂದ ಜಾಕೆ, ಝೋನ್ ಚಯರ್ ಪರ್ಸನ್ ಸಂತೋಷ್ ಜಾಕೆ, ಕ್ಲಬ್ ಎಕ್ಸ್ಟೆನ್ಶನ್ ಚೈರ್ ಪರ್ಸನ್ ಲ| ಆನಂದ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಪೆರುವಾಜೆ ಸ.ಹಿ.ಪ್ರಾ. ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕರು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಕೊಡುಗೆ ಸ್ವೀಕರಿಸಿದರು. ನಂತರ ಬೆಳ್ಳಾರೆ ಕೆ.ಪಿ.ಎಸ್.ಗೆ ಭೇಟಿ ನೀಡಿ ಅಲ್ಲಿಯೂ ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಲಾಯಿತು. ನಂತರ ನಿಂತಿಕಲ್ಲು ಜಂಕ್ಷನ್ ಗೆ ಅಳವಡಿಸಿದ ಮಾರ್ಗಸೂಚಿ ಫಲಕವನ್ನು ಗವರ್ನರ್ ಉದ್ಘಾಟಿಸಿದರು. ಸಂಜೆ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆ, ಪತ್ರಿಕಾ ಗೋಷ್ಠಿ ನಡೆದ ಬಳಿಕ ಬೆಳ್ಳಾರೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ| ಪಿ. ವಿಠಲ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಡಿಸ್ಟ್ರಿಕ್ಟ್ ಗವರ್ನರ್ ಲ| ಡಾ. ಮೆಲ್ವಿನ್ ಡಿ’ಸೋಜ ನೂತನ ಐವರು ಸದಸ್ಯರಿಗೆ ಲಯನ್ಸ್ ಪ್ರಮಾಣವಚನ ಬೋಧಿಸಿ, ಶುಭ ಹಾರೈಸಿದರು. ವೇದಿಕೆಯಲ್ಲಿ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲ| ಓಸ್ವಾಲ್ಡ್ ಡಿ’ಸೋಜ, ಲಿಯೋ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಲಿಯೋ ರಂಜಿತಾ ಶೆಟ್ಟಿ, ರೀಜಿನಲ್ ಚಯರ್ ಪರ್ಸನ್ ಲ| ರೇಣುಕಾ ಜಾಕೆ, ಝೋನ್ ಚಯರ್ ಪರ್ಸನ್ ಲ| ಸಂತೋಷ್ ಜಾಕೆ, ಬೆಳ್ಳಾರೆ ಕ್ಲಬ್‌ನ ಕಾರ್ಯದರ್ಶಿ ದಯಾನಂದ ನಾಯ್ಕ್ ಮತ್ತು ಕೋಶಾಧಿಕಾರಿ ಲ| ಪಿ. ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ಲ| ಭವಾನಿ ವಿ. ಶೆಟ್ಟಿ ಲಯನ್ಸ್ ಪ್ರೇಯರ್, ಲ| ಉಷಾ ಬಿ. ಭಟ್ ಧ್ವಜ ವಂದನೆ ಮತ್ತು ಲ| ಯತೀಶ್ ಭಂಡಾರಿ ಕೋಡ್ ಆಫ್ ಎಥಿಕ್ಸ್ ವಾಚಿಸಿದರು. ಕ್ಲಬ್ ಸೆಕ್ರೆಟರಿ ದಯಾನಂದ ನಾಯ್ಕ್ ವರದಿ ವಾಚಿಸಿದರು.

ಬಳಿಕ ಅನಾರೋಗ್ಯ ಪೀಡಿತ ನಳಿನಿಯವರಿಗೆ ಧನಸಹಾಯ, ಡ್ರಾಯಿಂಗ್ ನಲ್ಲಿ ವಿಶೇಷ ಸಾಧನೆ ಮಾಡಿದ ಬೆಳ್ಳಾರೆ ಕೆ.ಪಿ.ಎಸ್. ನ 8ನೇ ತರಗತಿ ವಿದ್ಯಾರ್ಥಿ ಪುಷ್ಯಂತ್ ಗೆ ಗೌರವ ಸ್ಮರಣಿಕೆ ನೀಡಲಾಯಿತು. ಬಳಿಕ ಚಂದ್ರಹಾಸ ರೈ ಪುಡ್ಕಜೆ, ಶ್ರೀಮತಿ ಆಶಾ ಚಂದ್ರಹಾಸ ರೈ, ಎಸ್.ಬಿ. ಜಯರಾಮ ರೈ, ಶ್ರೀಮತಿ ಹರಿಣಾಕ್ಷಿ ಜೆ ರೈ ಮತ್ತು ಈಶ್ವರ ವಾರಣಾಶಿ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಿ ಲಯನ್ಸ್ ಪಿನ್ ತೊಡಿಸಿ ಕ್ಲಬ್ ಗೆ ಬರಮಾಡಿ ಕೊಂಡರು. ಲ| ಹೊನ್ನಪ್ಪ ಬೆಳ್ಳಾರೆ, ಲ| ವಿಲಾಸ್ ರೈ ಮತ್ತು ಲ| ಉಷಾ ಬಿ. ಭಟ್ ನೂತನ ಸದಸ್ಯರ ಪರಿಚಯವನ್ನು ಸಭೆಗೆ ನೀಡಿದರು. ಲ |ಪ್ರೀತಮ್ ಶೆಟ್ಟಿ ಅವರು ಗವರ್ನರ್ ಲ| ಡಾ. ಮೆಲ್ವಿನ್ ಡಿ’ಸೋಜ ಅವರನ್ನು ಸಭೆಗೆ ಪರಿಚಯಿಸಿದರು , ಲ| ಚೇತನ್ ಶೆಟ್ಟಿ ಎಪ್ರಿಷಿಯೇಶನ್ ಪತ್ರ ವಾಚಿಸಿದರು. ಬಳಿಕ ಗವರ್ನರ್ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಬೆಳ್ಳಾರೆ ಕ್ಲಬ್‌ನ ಅಧ್ಯಕ್ಷ ಲ| ವಿಠಲ್ ಶೆಟ್ಟಿ ಸ್ವಾಗತಿಸಿ, ಲ| ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಕ್ಸ್ ಟೆನ್ಷನ್ ಚಯರ್ ಪರ್ಸನ್ ಲ| ಆನಂದ ರೈ ದೇವಿನಗರ ಮತ್ತು ಕ್ಲಬ್‌ನ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಾಂತ್ಯ 7 ಮತ್ತು 6 ರ ವಿವಿಧ ಲಯನ್ಸ್ ಕ್ಲಬ್‌ನ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸದಸ್ಯರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.