ಆಲೆಟ್ಟಿ: ಗುಂಡ್ಯ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮರೋಟ್

0

ಆಲೆಟ್ಟಿ ಗ್ರಾಮದ ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮರೋಟ್ (ಪುದಿಯೋಡ್ಕಲ್) ಕಾರ್ಯಕ್ರಮ ನ.25 ರಂದು ನಡೆಯಿತು.

ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಅನಿಲ್ ಕುಂಬ್ಡಾಜೆ ಹಾಗೂ ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ (ಉದುಮ) ರವರ ನೇತೃತ್ವದಲ್ಲಿ ದೈವದ ದರ್ಶನ ಸೇವೆಯು ಜರುಗಿತು. ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅಭಯದ ನುಡಿ ನೀಡುವುದರೊಂದಿಗೆ ಹರಸಿನ ಪ್ರಸಾದ ನೀಡಿದರು. ಸ್ಥಾನದ ಮನೆಯವರು ಹಾಗೂ
ಭಾರತೀಯ ತೀಯ ಸಮಾಜ ಬಾಂಧವರು ಸಹಕರಿಸಿದರು.
ದೈವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ರೈ ಗುಂಡ್ಯ ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನ ಪ್ರಸಾದ ವಿತರಣೆಯಾಯಿತು.