ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಪ್ರವಾಸ

0

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಿಂದ ವಿದ್ಯಾರ್ಥಿಗಳಿಗೆ ನ.25 ರಂದು ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.

ಸುಳ್ಯದ ಸ್ನೇಹ ಸ್ಕೂಲ್ , ಗಾಂಧಿನಗರದಲ್ಲಿರುವ ಮೋರ್ ಸೂಪರ್ ಮಾರ್ಕೆಟ್, ಹಳೆ ಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಲಾಯಿತು.

ಮಕ್ಕಳಿಗೆ ಮೋರ್ ಸೂಪರ್ ಮಾರ್ಕೆಟ್ ನಲ್ಲಿ ಹಣ್ಣು, ತರಕಾರಿಗಳ ಬಗ್ಗೆ ತಿಳಿಸಿಕೊಡಲಾಯಿತು, ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹರಿಪ್ರಸಾದ್ ಶೆಟ್ಟಿ ಎಂ. ದಂಪತಿ ಹಾಗೂ ಸಿಬ್ಬಂದಿ, ವಿದೇಶಿ ವಿದ್ಯಾರ್ಥಿಗಳೊಂದಿಗೆ ಬೆರೆತು ಸಂಭ್ರಮ ಪಟ್ಟರು. ಇದೇ ವೇಳೆ ಆಸ್ಪತ್ರೆ ವತಿಯಿಂದ ಮಕ್ಕಳಿಗೆ ಗಿಫ್ಟ್ ನೀಡಿ ಸಂತೈಸಿದರು.

ಸ್ನೇಹ ಸ್ಕೂಲ್ ನಲ್ಲಿ ಮರಳಿನ ಮನೆಯಲ್ಲಿ ಅಕ್ಷರಗಳನ್ನು ಬರೆಯಲು , ಆಟದ ಮೈದಾನದಲ್ಲಿ ಆಟ , ಸೂರ್ಯಾಲಾಯದಲ್ಲಿ ಸೂರ್ಯನ ಬಗ್ಗೆ , ಗ್ರಹಗಳ ಬಗ್ಗೆ, ಇಂಡಿಯಾ ಮ್ಯಾಪ್ ಸೇರಿದಂತೆ ಗಿಡಮರಗಳ ಕುರಿತು ಹೇಳಿಕೊಡಲಾಯಿತು. ಹಾಗೂ ಶಾಲೆಯ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ. ಯವರ ಮಾರ್ಗದರ್ಶನದಲ್ಲಿ ಶಿಕ್ಷಕಿ ನಿರ್ಮಲಾ, ಸಹಾಯಕಿ ಶ್ವೇತಾ, ಪೋಷಕ ಪ್ರತಿನಿಧಿ ಸುಶಾನ್ , ಪ್ರಶಾಂತ್ ಸಹಕರಿಸಿದರು.