ಡಿ.2 : ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

0

ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಆಶ್ರಯದಲ್ಲಿ ಡಿ.2 ರಂದು ಮುಕ್ತ ಕಬಡ್ಡಿ ಪಂದ್ಯಾಟ ದೇವಿ ಸಿಟಿ ಸಂಕೀರ್ಣದ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ

ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ, 8ನೇ ತರಗತಿ ಬಾಲಕರ, ಪ್ರೌಢಶಾಲಾ ಬಾಲಕ-ಬಾಲಕಿಯರ, ಪದವಿಪೂರ್ವ ಕಾಲೇಜು ಬಾಲಕಿಯರ, ಹಾಗೂ ಪದವಿ ಕಾಲೇಜು ಬಾಲಕಿಯರ ಹಾಗೂ ಸಾರ್ವಜನಿಕ ಪುರುಷರ 65 ಕೆಜಿ. ಕಬಡ್ಡಿ ಪಂದ್ಯಾಟ ನಡೆಯಲಿದೆ.

ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಬಹುಮಾನ ಹಾಗೂ ಶಾಶ್ವತ ಫಲಕ ಮತ್ತು ವೈಯುಕ್ತಿಕ ಬಹುಮಾನಗಳು ಇರಲಿದ್ದು ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸರ್ವಾಂಗೀಣ ಆಟಗಾರಿಗೆ ನಗದು ಹಾಗೂ ಶಾಶ್ವತ ಫಲಕ ಇರಲಿದೆ.

ಪಂದ್ಯಾಟವನ್ನು ದೇವಿಸಿಟಿ ಸಂಕೀರ್ಣದ ಮಾಲಕ ದೇವಿಪ್ರಸಾದ್ ಚಿಕ್ಮುಳಿ ಉದ್ಘಾಟಿಸಲಿದ್ದಾರೆ.