ಡಿ.3-5: ಕುಂಚಡ್ಕ ಐನ್ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆ ಹಾಗೂ ವಿಷ್ಣುಮೂರ್ತಿ ಧರ್ಮ ದೈವ ಉಪದೈವಗಳ ನಡಾವಳಿ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಐನ್ ಮನೆಯಲ್ಲಿ ಡಿ.3 ರಿಂದ 5 ರ ತನಕ ಶ್ರೀ ಮಹಾಲಕ್ಷ್ಮಿ ಪೂಜೆ
ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ಮತ್ತು ಉಪದೈವಗಳ ನಡಾವಳಿಯು ನಡೆಯಲಿರುವುದು.

ಡಿ.2 ರಂದು ರಾತ್ರಿ ಗಂಟೆ 8.00 ರಿಂದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದು ನಡೆಯಲಿದೆ. ಡಿ.3 ರಂದು ಪೂ.ಗಂಟೆ 9.00 ರಿಂದ ಶ್ರೀ ಮಹಾಲಕ್ಷ್ಮಿ ದೇವರ ಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು.ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯು ನೆರವೇರಲಿದೆ. ರಾತ್ರಿ ಗಂಟೆ 8.00 ರಿಂದ ಶ್ರೀ ದೈವಗಳ ನಡಾವಳಿಗೆ ಕೂಡುವುದು ನಂತರ ಅನ್ನ ಪ್ರಸಾದ ವಿತರಣೆಯಾಗಲಿದೆ.
ಡಿ.4 ರಂದು ಪ್ರಾತ:ಕಾಲ ಗಂಟೆ 4.00 ರಿಂದ ಶ್ರೀ ಉಳ್ಳಾಕುಲು, ಮುಡ ಚಾಮುಂಡಿ ,
ಶ್ರೀಧೂಮಾವತಿ ,ಭವನ,ಕುಪ್ಪೆ ಪಂಜುರ್ಲಿ, ನೆಲ್ಲೂರಾಯ, ಕೊರಗರು, ಪುರುಷ, ಮೂವ, ಮತಿ ಮುದ್ದ,ಅಂಗಾರ ಬಾಕುಡ, ಕೂಜಿ ದೈವಗಳ ನಡಾವಳಿಯು ನಡೆಯಲಿದೆ.
ಈ ಸಂದರ್ಭದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಅನ್ನ ಸಂತರ್ಪಣೆಯಾಗಲಿದೆ.
ಅದೇ ದಿನ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ಮತ್ತು ಕುಳ್ಚಾಟ ,
ಗುರುಕಾರ್ನೋರ್, ದೇವತೆ ಹಾಗೂ ವರ್ಣಾರ ಪಂಜುರ್ಲಿ ದೈವಗಳ ನಡಾವಳಿಯು ನಡೆಯಲಿದೆ.
ಡಿ.5 ರಂದು ಬೆಳಗ್ಗೆ ಗಂಟೆ 7.00 ಕ್ಕೆ ಶ್ರೀ ರಕ್ತೇಶ್ವರೀ ದೈವ,ಶ್ರೀವಿಷ್ಣುಮೂರ್ತಿ ,ಶ್ರೀ ಧರ್ಮದೈವ ಹಾಗೂ ಶ್ರೀ ಪಾಷಾಣಮೂರ್ತಿ ದೈವಗಳ ನಡಾವಳಿಯು ನಡೆಯಲಿರುವುದು. ಮಧ್ಯಾಹ್ನ
ಅನ್ನಸಂತರ್ಪಣೆಯಾಗಿ ಅಪರಾಹ್ನ ಗಂಟೆ 4.00 ರಿಂದ ಶ್ರೀ ಗುಳಿಗ ದೈವದ ಕೋಲ ಹಾಗೂ ಶ್ರೀ ಧರ್ಮದೈವದ ಅನ್ನ ಪ್ರಸಾದವಿತರಣೆಯಾಗಲಿರುವುದು ಎಂದು ಆಡಳಿತ ಸಮಿತಿ ಅಧ್ಯಕ್ಷ ಪೂವಯ್ಯ ಗೌಡ ಕುಂಚಡ್ಕ ತಿಳಿಸಿರುತ್ತಾರೆ.