ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆಗೆ ಹಲವು ಪ್ರಶಸ್ತಿ

0

ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಯು ನ.15 ಮತ್ತು ನ.16 ರಂದು ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿಯಲ್ಲಿ ನಡೆಯಿತು.
ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸಮನ್ಯು ಎಸ್ ಶೆಟ್ಟಿ, ಅಭಿರಾಮ ಭಟ್(10ನೇ ತರಗತಿ ) ರಸಪ್ರಶ್ನೆ ಸ್ಪರ್ಧೆ ಪ್ರಥಮ, ಸಾನ್ವಿ( 10ನೇ ತರಗತಿ ) ಇಂಗ್ಲಿಷ್ ಭಾಷಣ ದ್ವಿತೀಯ, ಫಾತಿಮಾತ್ ಸನ ( 9ನೇ ತರಗತಿ ) ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ.
ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಾದ ಪಲ್ಲವಿ ಜೆ.ಎಚ್ ( 5ನೇ ತರಗತಿ ) ಕವನ ವಾಚನ ಪ್ರಥಮ, ಮೊಹಮ್ಮದ್ ಹಫೀಜ್ ( 6ನೇ ತರಗತಿ )ಇಂಗ್ಲಿಷ್ ಕಂಠಪಾಠ ದ್ವಿತೀಯ, ಅಶ್ವಿಜ್ ಆತ್ರೆಯ( 6ನೇ ತರಗತಿ) ಲಘು ಸಂಗೀತ ತೃತೀಯ ಬಹುಮಾನಗಳನ್ನು ಗಳಿಸಿರುತ್ತಾರೆ. ಅಲ್ಲದೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಸಮನ್ಯು ಎಸ್ ಶೆಟ್ಟಿ, ಅಭಿರಾಮ್ ಭಟ್, ಪಲ್ಲವಿ ಜೆ ಹೆಚ್ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ.