ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

0

ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಡಿ. 01 ರಂದು ನಡೆಯಿತು.
ರೋಟರಿ ಚಾರೀಟೇಬಲ್ ಟ್ರಸ್ಟ್ (ರಿ ) ಸುಳ್ಯ ದ ಚೇರ್ಮನ್ ರಾದ ರೊ.ಆನಂದ ಖಂಡಿಗ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ , ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿ, ಅರಂತೋಡು ಎನ್ ಎಂ ಪಿ ಯು ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರೊ.ಎ ಸಿ ವಸಂತ ಅಮಚೂರ್ ರವರು ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು.

ಸಂಸ್ಥೆಯ ಸಂಚಾಲಕರಾದ ರೊ.ಪಿಪಿ ಪಿಹೆಚ್ಎಫ್ ಗಿರಿಜಾಶಂಕರ ತುದಿಯಡ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ರೋಟರಿ ಚಾರೀಟೇಬಲ್ ನ ಟ್ರಸ್ಟಿಗಳಾದ ರೊ. ಪಿಪಿ ಪಿಹೆಚ್ಎಫ್ ದಯಾನಂದ ಆಳ್ವ, ರೊ.ಪಿಪಿ ಪಿಹೆಚ್ಎಫ್ ಪ್ರಭಾಕರನ್ ನಾಯರ್, ರೊ. ಮಹಾಲಕ್ಷ್ಮಿ ಕೊರಂಬಡ್ಕ , ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ ಕೆ ಎಸ್ ಹಾಗೂ ಸಂಸ್ಥೆಯ ಪೋಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಸ್ವಾಗತಿಸಿ,ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ವಂದಿಸಿದರು. ಮುಖ್ಯ ಅತಿಥಿಗಳನ್ನು ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ಪರಿಚಯಿಸಿದರು.ವಿದ್ಯಾರ್ಥಿಗಳಾದ ಕು.ದ್ರುವಿ, ಕು. ಶಮಿತ, ಕು.ರಮ್ಯಪಾರ್ವತಿ ಪ್ರಾರ್ಥಿಸಿದರು. ಉಪನ್ಯಾಸಕಿ ಕು. ದೀಕ್ಷಿತಾ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು.